ಟರ್ಕಿ: 10 ಪ್ರಾಂತಗಳಲ್ಲಿ 3 ತಿಂಗಳು ತುರ್ತು ಪರಿಸ್ಥಿತಿ ಜಾರಿ

Update: 2023-02-07 17:45 GMT

ಅಂಕಾರ, ಫೆ.7: ಟರ್ಕಿಯಲ್ಲಿ 3,500ಕ್ಕೂ ಅಧಿಕ ಜನರ ಸಾವಿಗೆ ಕಾರಣವಾದ ಭೀಕರ ಭೂಕಂಪದಲ್ಲಿ ಅತ್ಯಧಿಕ ಜರ್ಝರಿತಗೊಂಡಿರುವ 10 ಪ್ರಾಂತಗಳಲ್ಲಿ 3 ತಿಂಗಳು ತುರ್ತು ಪರಿಸ್ಥಿತಿಯನ್ನು ಅಧ್ಯಕ್ಷ ರಿಸೆಪ್ ತಯಿಪ್ ಎರ್ಡೋಗನ್ ಮಂಗಳವಾರ ಘೋಷಿಸಿದ್ದಾರೆ.

ಟಿವಿ ವಾಹಿನಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಎರ್ಡೋಗನ್ ‘ ನಮ್ಮ ರಕ್ಷಣೆ ಮತ್ತು ಪರಿಹಾರ ತ್ವರಿತವಾಗಿ ಸಾಗುವುದನ್ನು ಖಾತರಿ ಪಡಿಸಲು 10 ಪ್ರಾಂತಗಳಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಲಾಗುವುದು ಎಂದವರು ಹೇಳಿದ್ದಾರೆ. ರಕ್ಷಣೆ ಮತ್ತು ಪರಿಹಾರ ಕಾರ್ಯದಲ್ಲಿ 70 ದೇಶಗಳು ನೆರವಿನ ಹಸ್ತ ಚಾಚಿವೆ. ಭೂಕಂಪದಿಂದ ಟರ್ಕಿಯಲ್ಲಿ 3,549 ಮಂದಿ ಮೃತಪಟ್ಟಿದ್ದು 20,426 ಮಂದಿ ಗಾಯಗೊಂಡಿದ್ದಾರೆ. ಸೋಮವಾರದ ಭೂಕಂಪದ ಬಳಿಕ 285 ಪಶ್ಚಾತ್ ಕಂಪನಗಳು ಸಂಭವಿಸಿದ್ದು 5,775 ಕಟ್ಟಡಗಳು ನಾಶವಾಗಿದೆ. ಸಿರಿಯಾದಲ್ಲಿ ಮೃತಪಟ್ಟವರ ಸಂಖ್ಯೆ 1,600ನ್ನು ದಾಟಿದೆ ಎಂದು ವರದಿಯಾಗಿದೆ.

Similar News