×
Ad

ಟರ್ಕಿಯ ಮಧ್ಯಭಾಗದಲ್ಲಿ 5.5 ತೀವ್ರತೆಯ ಭೂಕಂಪ

Update: 2023-02-25 18:49 IST

ಇಸ್ತಾಂಬುಲ್:‌ ಟರ್ಕಿಯ ಮಧ್ಯ ಭಾಗದಲ್ಲಿ ಶನಿವಾರದಂದು 5.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್‌ ಮೆಡಿಟರೇನಿಯನ್‌ ಸೀಸ್ಮೋಲಾಜಿಕಲ್‌ ಸೆಂಟರ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಹತ್ತು ಕಿಲೋಮೀಟರ್‌ ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ಅದು ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ ಎಂದು timesofindia.com ವರದಿ ಮಾಡಿದೆ. ಯಾವುದೇ ಸಾವು ನೋವಿನ ಕುರಿತು ಈವರೆಗೆ ವರದಿಯಾಗಿಲ್ಲ.

Similar News