×
Ad

ಭೋಪಾಲ-ಉಜ್ಜೈನ್ ರೈಲಿನಲ್ಲಿ ಸ್ಫೋಟ ಪ್ರಕರಣ: ಏಳು ಜನರಿಗೆ ಮರಣ ದಂಡನೆ

Update: 2023-03-01 22:25 IST

ಲಕ್ನೋ,ಮಾ.1: ಇಲ್ಲಿಯ ಎನ್ಐಎ ವಿಶೇಷ ನ್ಯಾಯಾಲಯವು ಭೋಪಾಲ-ಉಜ್ಜೈನ್ ಪ್ಯಾಸೆಂಜರ್ ರೈಲಿನಲ್ಲಿ ಸ್ಫೋಟ ಪ್ರಕರಣದಲ್ಲಿ ಎಂಟು ತಪ್ಪಿತಸ್ಥರ ಪೈಕಿ ಏಳು ಜನರಿಗೆ ಮರಣ ದಂಡನೆಯನ್ನು ಪ್ರಕಟಿಸಿದ್ದು, ಓರ್ವನಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

ಮುಹಮ್ಮದ್ ಫೈಸಲ್, ಗೌಸ್ ಮುಹಮ್ಮದ್‌ ಖಾನ್,‌ ಅಝರ್, ಆತಿಫ್ ಮುಝಫ್ಫರ್, ದಾನಿಷ್, ಮೀರ್ ಹುಸೇನ್ ಮತ್ತು ಆಸಿಫ್ ಇಕ್ಬಾಲ್ ಮರಣದಂಡನೆಗೆ ಮತ್ತು ಆತಿಫ್ ಇರಾಕಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ.

2017,ಮಾ.7ರಂದು ಭೋಪಾಲ-ಉಜ್ಜೈನ್ ಪ್ಯಾಸೆಂಜರ್ ರೈಲಿನಲ್ಲಿ ಭಯೋತ್ಪಾದಕರು ಬಾಂಬ್ ಸ್ಫೋಟಿಸಿದ್ದರು. ಘಟನೆಯಲ್ಲಿ 10 ಜನರು ಗಾಯಗೊಂಡಿದ್ದರು.

Similar News