ಪಾಕ್ ಮಾಜಿ ಪ್ರಧಾನಿ ಇಮ್ರಾನ್ ವಿರುದ್ಧ ಭಯೋತ್ಪಾದನೆ ಪ್ರಕರಣ

Update: 2023-03-19 18:36 GMT

ಇಸ್ಲಮಾಬಾದ್, ಮಾ.19: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ಖಾನ್ ಹಾಗೂ ಇತರ ಹಲವು ಪಿಟಿಐ ಮುಖಂಡರ ವಿರುದ್ಧ ಪಾಕಿಸ್ತಾನದ ಪೊಲೀಸರು ರವಿವಾರ ಭಯೋತ್ಪಾದನೆ ಪ್ರಕರಣ ದಾಖಲಿಸಿದ್ದಾರೆ.

ಇಸ್ಲಮಾಬಾದ್ ನ್ಯಾಯಾಲಯದ ಹೊರಗೆ ವಿಧ್ವಂಸಕ ಕೃತ್ಯ, ಭದ್ರತಾ ಸಿಬಂದಿಯ ಮೇಲೆ ದಾಳಿ, ನ್ಯಾಯಾಲಯದ ಹೊರಗೆ ಅಶಾಂತಿ ಸೃಷ್ಟಿಸಿರುವ ಆರೋಪದಡಿ ಭಯೋತ್ಪಾದನೆ ಪ್ರಕರಣ ದಾಖಲಾಗಿದೆ. ತೋಷಖಾನಾ ಪ್ರಕರಣದಲ್ಲಿ ಹೇಳಿಕೆ ನೀಡಲು ಇಮ್ರಾನ್‌ಖಾನ್ ಶನಿವಾರ ಲಾಹೋರ್‌ನಿಂದ ಇಸ್ಲಮಾಬಾದ್ ನ್ಯಾಯಾಲಯಕ್ಕೆ ಆಗಮಿಸಿದ ಸಂದರ್ಭ, ನ್ಯಾಯಾಲಯದ ಹೊರಗೆ  ಗುಂಪುಸೇರಿದ್ದ ಅವರ ಬೆಂಬಲಿಗರು ಪೊಲೀಸ್ ಸಿಬಂದಿ ಜತೆ ಘರ್ಷಣೆ ನಡೆಸಿದ್ದರು.

ಘರ್ಷಣೆಯಲ್ಲಿ 25ಕ್ಕೂ ಅಧಿಕ ಭದ್ರತಾ ಸಿಬಂದಿಗಳ ಸಹಿತ ಹಲವರು ಗಾಯಗೊಂಡಿದ್ದರು. ಅಶಾಂತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮಾರ್ಚ್ 30ರವರೆಗೆ ಮುಂದೂಡಲಾಗಿತ್ತು. ದೊಂಬಿ, ಕಲ್ಲೆಸೆತ ಮತ್ತು ನ್ಯಾಯಾಂಗ ಇಲಾಖೆಯ ಕಟ್ಟಡಕ್ಕೆ ಹಾನಿ ಎಸಗಿದ ಆರೋಪದಡಿ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ 18 ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು.

Similar News