ಮೋದಿ ಸೇರಿದಂತೆ ಭಾರತದ ನಾಯಕರು ನೀಡಿರುವ ಉಡುಗೊರೆಗಳ ವಿವರ ಬಹಿರಂಗಪಡಿಸಲು ಟ್ರಂಪ್ ವಿಫಲ: ವರದಿ

Update: 2023-03-21 09:32 GMT

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಸರಕಾರದ ಅವಧಿಯಲ್ಲಿ ಪಡೆದ ಒಟ್ಟು 2.5 ಲಕ್ಷ ಡಾಲರ್(2.06 ಕೋ.ರೂ.)ಮೌಲ್ಯದಉಡುಗೊರೆಗಳ ವಿವರಗಳನ್ನು ಬಹಿರಂಗಪಡಿಸಲು  ವಿಫಲರಾಗಿದ್ದಾರೆ ಎಂದು ಆಡಳಿತ ಪಕ್ಷವಾದ ಡೆಮಾಕ್ರಾಟಿಕ್ ತನ್ನ ವರದಿಯಲ್ಲಿ ತಿಳಿಸಿದೆ.

 ಈ ಉಡುಗೊರೆಯಲ್ಲಿ ಭಾರತದ ಪ್ರಧಾನಿ ಮೋದಿ. ರಾಷ್ಟ್ರಪತಿ ರಾಮನಾಥ ಕೋವಿಂದ್  ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಕೊಟ್ಟ ಒಟ್ಟು 47 ಸಾವಿರ ಡಾಲರ್(38.05 ಲಕ್ಷ ರೂ.)ಮೌಲ್ಯದ ಉಡುಗೊರೆಗಳೂ ಸೇರಿವೆ ಎಂದು ವರದಿಯಲ್ಲಿ ದೂರಲಾಗಿದೆ.

ಡೆಮಾಕ್ರಾಟಿಕ್ ಪಕ್ಷದ ಸಮಿತಿಯ ಪ್ರಾಥಮಿಕ ಸಂಶೋಧನೆಯ ಮೂಲಕ ವರದಿ ಬಿಡುಗಡೆಗೊಳಿಸಿದ್ದು, 'ಸೌದಿಯ ಖಡ್ಗಗಳು, ಭಾರತದ ಆಭರಣಗಳು ಹಾಗೂ ಸಾಲ್ವಡೋರ್ ನಲ್ಲಿ ರಚಿಸಿದ ಟ್ರಂಪ್ ಅವರ ಬೃಹತ್ ಭಾವಚಿತ್ರ ಮುಂತಾದ ಲಕ್ಸುರಿ ಉಡುಗೊರೆಗಳ ವಿವರಗಳನ್ನು ತಿಳಿಸಲು ಟ್ರಂಪ್ ಸರಕಾರ ಹಿಂದೇಟು ಹಾಕಿದೆ' ಎಂಬ ತಲೆಬರಹದಡಿ ವರದಿ ಪ್ರಕಟಿಸಿದೆ.

ವಿದೇಶದ ಅಧಿಕಾರಿಗಳಿಂದ ಪಡೆದ ಉಡುಗೊರೆಗಳ ವಿವರಗಳನ್ನು ಮುಚ್ಚಿಟ್ಟಿರುವುದು ಇಲ್ಲಿನ ಸರಕಾರಿ ಗಿಫ್ಟ್ ಸಂಬಂಧಿತ ಕಾನೂನಿಗೆ ವಿರುದ್ದವಾಗಿದೆ ಎಂದು ತಿಳಿದುಬಂದಿದೆ.

Similar News