ಅಮೃತ್‌ ಪಾಲ್ ಸಿಂಗ್ ಕುರಿತ ಟಿವಿ ಚರ್ಚೆ: ಕೆನಡಾ ಪತ್ರಕರ್ತನಿಗೆ ಬೆದರಿಕೆ ಕರೆ‌

Update: 2023-03-23 17:20 GMT

ಟೊರಂಟೊ, ಮಾ.23: `ವಾರಿಸ್ ಪಂಜಾಬ್ ದೆ' ಮುಖ್ಯಸ್ಥ ಅಮೃತ್ಪಾಲ್ ಸಿಂಗ್ ಕುರಿತು ತನ್ನ ಟಿವಿ ಶೋದಲ್ಲಿ  ಚರ್ಚೆ ನಡೆಸಿದ್ದಕ್ಕಾಗಿ ಭಾರತೀಯ-ಕೆನಡಾ ಪತ್ರಕರ್ತನಿಗೆ ಬೆದರಿಕೆ ಕರೆ ಬಂದಿರುವುದಾಗಿ ವರದಿಯಾಗಿದೆ.

‌ಪಂಜಾಬ್ ಭಾಷೆಯ ಈ ಕಾರ್ಯಕ್ರಮವನ್ನು ಪ್ರದೀಪ್  ಬೈನ್ಸ್ ಎಂಬ ಭಾರತೀಯ ಕೆನಡಿಯನ್ ಪತ್ರಕರ್ತ ನಿರೂಪಿಸಿದ್ದು ಕಾರ್ಯಕ್ರಮದಲ್ಲಿ ಪಂಜಾಬ್ನ ಹೋಷಿಯಾರ್ಪುರ ಜಿಲ್ಲೆಯಲ್ಲಿರುವ ಅಮೃತ್ಪಾಲ್ ಸಿಂಗ್ ನ ಕುಟುಂಬದವರ ಮನೆಯ ಫೋಟೊವನ್ನು ತೋರಿಸಲಾಗಿತ್ತು. ಚರ್ಚೆಯ ಸಂದರ್ಭ ಎರಡೂ ಕಡೆಯವರ ವಾದಕ್ಕೆ ಸಮಾನ ಅವಕಾಶ ನೀಡಲಾಗಿತ್ತು. ಆದರೂ ಕಾರ್ಯಕ್ರಮ ಪ್ರಸಾರಗೊಂಡ ಬಳಿಕ ಬೆದರಿಕೆ ಕರೆ ಬರುತ್ತಿದೆ.

ವಾಟ್ಸಾಪ್ ನಲ್ಲಿ ಬಂದಿರುವ ಬೆದರಿಕೆ ಕರೆಯ ಮೂಲ ಪಾಕಿಸ್ತಾನ ಮತ್ತು ಮಲೇಶ್ಯದಲ್ಲಿರುವುದು ಪತ್ತೆಯಾಗಿದೆ. ಅಲ್ಲದೆ ಕಳೆದ ಫೆಬ್ರವರಿಯಲ್ಲಿ ಖಲಿಸ್ತಾನ್ ಲಿಬರೇಷನ್ ಫೋರ್ಸ್ನಿಂದಲೂ ಬೆದರಿಕೆ ಪತ್ರ ಬಂದಿದೆ ಎಂದವರು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.

Similar News