ಉಕ್ರೇನ್ ಪುನನಿರ್ಮಾಣ ವೆಚ್ಚ 411 ಶತಕೋಟಿ ಡಾಲರ್: ವಿಶ್ವಬ್ಯಾಂಕ್

Update: 2023-03-23 17:25 GMT

ನ್ಯೂಯಾರ್ಕ್, ಮಾ.23: ಯುದ್ಧದಿಂದ ಜರ್ಝರಿತಗೊಂಡಿರುವ ಉಕ್ರೇನ್ ನ ಪುನನಿರ್ಮಾಣಕ್ಕೆ ಸುಮಾರು 411 ಶತಕೋಟಿ ಡಾಲರ್ ನಷ್ಟು ವೆಚ್ಚವಾಗಬಹುದು ಎಂದು ವಿಶ್ವಬ್ಯಾಂಕ್ ನ ವರದಿ ಹೇಳಿದೆ.

ಕಳೆದ 15 ವರ್ಷದಲ್ಲಿ ಉಕ್ರೇನ್ ಸಾಧಿಸಿದ್ದ ಅರ್ಥವ್ಯವಸ್ಥೆಯ ಅಭಿವೃದ್ಧಿಯನ್ನು ರಶ್ಯದ ಆಕ್ರಮಣ ವಿಫಲಗೊಳಿಸಿದ್ದು ಉಕ್ರೇನ್ ನ ಜಿಡಿಪಿಯನ್ನು 29%ದಷ್ಟು ಕಡಿತಗೊಳಿಸಿದೆ. ಜತೆಗೆ ಉಕ್ರೇನ್ ನ 1.7 ದಶಲಕ್ಷ ಜನರನ್ನು ಬಡತನದ ದವಡೆಗೆ ನೂಕಿದೆ ಎಂದು ಬುಧವಾರ ಬಿಡುಗಡೆಗೊಂಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಯುದ್ಧದ ಅವಶೇಷಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೇ 5 ಶತಕೋಟಿ ಡಾಲರ್ನಷ್ಟು ವೆಚ್ಚವಾಗಲಿದೆ. ಯುದ್ಧದಿಂದಾಗಿ ಉಕ್ರೇನ್ನಲ್ಲಿ 461 ಮಕ್ಕಳ ಸಹಿತ  ಕನಿಷ್ಟ 9,655 ನಾಗರಿಕರು ಮೃತಪಟ್ಟಿದ್ದು ಸುಮಾರು 2 ದಶಲಕ್ಷದಷ್ಟು ಮನೆಗಳು ಹಾನಿಗೊಂಡಿವೆ. 650 ಆಂಬ್ಯುಲೆನ್ಸ್ಗಳು ಮತ್ತು 20%ದಷ್ಟು ಸಾರ್ವಜನಿಕ ಆರೋಗ್ಯ ಕೇಂದ್ರಗಳು ನಾಶಗೊಂಡಿವೆ ಎಂದು ವರದಿ ಹೇಳಿದೆ.

Similar News