×
Ad

ಇಮ್ರಾನ್ ವಿರುದ್ಧದ ಪ್ರಕರಣಗಳ ತನಿಖೆಗೆ ಜೆಐಟಿ ರಚನೆ

Update: 2023-03-24 22:43 IST

ಇಸ್ಲಮಾಬಾದ್, ಮಾ.24: ಮಾಜಿ ಪ್ರಧಾನಿ ಇಮ್ರಾನ್‍ಖಾನ್ ವಿರುದ್ಧದ ಪ್ರಕರಣಗಳ ತನಿಖೆಗೆ ಉನ್ನತ ಮಟ್ಟದ ಜಂಟಿ ತನಿಖಾ ಸಮಿತಿ(ಜೆಐಟಿ) ರಚಿಸಿರುವುದಾಗಿ ಪಾಕಿಸ್ತಾನ ಸರಕಾರ ಘೋಷಿಸಿದೆ.

ಇಮ್ರಾನ್ ಹಾಗೂ ಅವರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಕಾರ್ಯಕರ್ತರ ವಿರುದ್ಧ ದಾಖಲಾಗಿರುವ 4 ಪ್ರಕರಣಗಳ ತನಿಖೆಯನ್ನು ಈ ಸಮಿತಿಗೆ ವಹಿಸಲಾಗುವುದು ಎಂದು ಆಂತರಿಕ ಸಚಿವ ರಾಣಾ ಸನಾವುಲ್ಲರನ್ನು ಉಲ್ಲೇಖಿಸಿ ಜಿಯೊ ನ್ಯೂಸ್ ವರದಿ ಮಾಡಿದೆ.

ಪಂಜಾಬ್ ವಿಶೇಷ ಪೊಲೀಸ್ ಪಡೆಯ ಎಐಜಿಪಿ ಝುಲ್ಫಿಕರ್ ಹಮೀದ್ ಸಮಿತಿಯ ಅಧ್ಯಕ್ಷರಾಗಿದ್ದು ಐಎಸ್‍ಐ, ಗುಪ್ತಚರ ವಿಭಾಗ, ಮಿಲಿಟರಿ ಇಂಟೆಲಿಜೆನ್ಸ್‍ನ ಪ್ರತಿನಿಧಿಗಳು, ಇಸ್ಲಮಾಬಾದ್‍ನ ಡಿಐಜಿ ಕೇಂದ್ರಕಚೇರಿಯ ಅವಾಯಿಸ್ ಅಹ್ಮದ್ ಸಮಿತಿಯ ಸದಸ್ಯರಾಗಿರುತ್ತಾರೆ. ಸಮಿತಿಯು 14 ದಿನಗಳೊಳಗೆ ತನ್ನ ವಿಚಾರಣೆ ಮುಗಿಸಿ ನ್ಯಾಯಾಲಯಕ್ಕೆ ವರದಿ ಒಪ್ಪಿಸಬೇಕಿದೆ ಎಂದು ಸನಾವುಲ್ಲಾ ಹೇಳಿದ್ದಾರೆ. 

Similar News