ಗಾಂಧೀಜಿ ಪ್ರತಿಮೆ ವಿರೂಪ ಘಟನೆ ದ್ವೇಷ ಪ್ರಕರಣ ದಾಖಲಿಸಿದ ಕೆನಡಾ ಪೊಲೀಸರು

Update: 2023-03-26 17:33 GMT

ಟೊರಂಟೊ, ಮಾ.26: ಕೆನಡಾದ ಹ್ಯಾಮಿಲ್ಟನ್‍ನಲ್ಲಿ ಮಹಾತ್ಮಾ ಗಾಂಧೀಜಿ ಪ್ರತಿಮೆಯನ್ನು ವಿರೂಪಗೊಳಿಸಿ ಭಾರತ ವಿರೋಧಿ ಮತ್ತು ಖಾಲಿಸ್ತಾನ್ ಪರ ಘೋಷಣೆ ಬರೆದಿರುವ ಪ್ರಕರಣವನ್ನು ದ್ವೇಷ ಪ್ರಕರಣ ಎಂದು ಪರಿಗಣಿಸಿ ತನಿಖೆ ಆರಂಭಿಸಲಾಗಿದೆ ಎಂದು ಹ್ಯಾಮಿಲ್ಟನ್ ಪೊಲೀಸರು ಹೇಳಿದ್ದಾರೆ.

ಒಂಟಾರಿಯೊ ಪ್ರಾಂತದ ಹ್ಯಾಮಿಲ್ಟನ್ ನಗರ ಪುರಭವನದ ಬಳಿ ಇರುವ ಗಾಂಧೀಜಿಯವರ 6 ಅಡಿ ಎತ್ತರದ ಕಂಚಿನ ಪ್ರತಿಮೆಗೆ ಬಣ್ಣಬಳಿದು ವಿರೂಪಗೊಳಿಸಲಾಗಿದ್ದು ಪ್ರತಿಮೆಯ ತಳಭಾಗದಲ್ಲಿ ಗಾಂಧೀಜಿ ಹಾಗೂ ಪ್ರಧಾನಿ ನರೇಂದ್ರ ಮೋದಿಯನ್ನು ನಿಂದಿಸುವ ಬರಹ ಗೀಚಲಾಗಿತ್ತು. ಪ್ರತಿಮೆಯ ಕೈಯಲ್ಲಿರುವ ಕೋಲಿಗೆ ಖಲಿಸ್ತಾನ್ ಧ್ವಜವನ್ನು ಸಿಕ್ಕಿಸಲಾಗಿತ್ತು.

ಈ ಪ್ರಕರಣವನ್ನು ದ್ವೇಷ ಪ್ರಕರಣ ಘಟಕಕ್ಕೆ ವರ್ಗಾಯಿಸಲಾಗಿದ್ದು ಘಟನೆಗೆ ಸಂಬಂಧಿಸಿ ಯಾವುದಾದರೂ ಮಾಹಿತಿ ಲಭ್ಯವಿದ್ದರೆ ತಕ್ಷಣ ಒದಗಿಸುವಂತೆ ಪೊಲೀಸರು ವಿನಂತಿಸಿದ್ದಾರೆ.

Similar News