ರಶ್ಯ: ಅಮೆರಿಕದ ಪತ್ರಕರ್ತನ ಬಂಧನ

Update: 2023-03-30 17:45 GMT

ಮಾಸ್ಕೊ, ಮಾ.30: ಬೇಹುಗಾರಿಕೆ ನಡೆಸುತ್ತಿದ್ದ ಶಂಕೆಯ ಮೇಲೆ ರಶ್ಯಾವು ಅಮೆರಿಕದ `ವಾಲ್‍ಸ್ಟ್ರೀಟ್ ಜರ್ನಲ್' ಪತ್ರಿಕೆಯ ವರದಿಗಾರನನ್ನು ಬಂಧಿಸಿರುವುದಾಗಿ ವರದಿಯಾಗಿದೆ.

ಅಮೆರಿಕದ ವಾಲ್‍ಸ್ಟ್ರೀಟ್ ಜರ್ನಲ್ ಪತ್ರಿಕೆಯ ವರದಿಗಾರ, ಅಮೆರಿಕನ್ ಪ್ರಜೆ ಇವಾನ್ ಗೆಷ್ರ್ಕೋವಿಚ್ ರಶ್ಯದ ಯೆಕಟೆಯ್ನ್‍ಬರ್ಗ್‍ನ ಉರಾಲ್ಸ್ ನಗರದಲ್ಲಿ ನಡೆಸುತ್ತಿದ್ದ ಕಾನೂನುಬಾಹಿರ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ. ಅವರು ಅಮೆರಿಕ ಸರಕಾರದ ಪರವಾಗಿ ಬೇಹುಗಾರಿಕೆ ನಡೆಸುತ್ತಿರುವುದು ದೃಢಪಟ್ಟಿರುವುದರಿಂದ ಬಂಧಿಸಲಾಗಿದೆ ಎಂದು ರಶ್ಯದ ಎಫ್‍ಎಸ್‍ಬಿ ಸೆಕ್ಯುರಿಟಿ ಸರ್ವಿಸ್ ಹೇಳಿದೆ.

ರಶ್ಯದ ಮಿಲಿಟರಿ-ರಕ್ಷಣಾ ಸಂಕೀರ್ಣದ ಒಂದು ಉದ್ಯಮದ ಚಟುವಟಿಕೆ ಬಗ್ಗೆ ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ಇವಾನ್‍ಗೆ ಅಮೆರಿಕ ವಹಿಸಿಕೊಟ್ಟಿದೆ ಎಂದು ಅಧಿಕಾರಿಗಳು ಪ್ರತಿಪಾದಿಸಿದ್ದಾರೆ. ಮಾಸ್ಕೋ ಟೈಮ್ಸ್ ಎಂಬ ವೆಬ್‍ಸೈಟ್‍ನ ವರದಿಗಾರನಾಗಿದ್ದ  ಇವಾನ್ ಗೆಷ್ರ್ಕೋವಿಚ್ ಬಳಿಕ ಎಎಫ್‍ಪಿ ಸುದ್ಧಿಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಆ ಬಳಿಕ ವಾಲ್‍ಸ್ಟ್ರೀಟ್ ಜರ್ನಲ್ ಪತ್ರಿಕೆಯ ರಶ್ಯ ವರದಿಗಾರನಾಗಿ ನೇಮಕಗೊಂಡಿದ್ದರು.

Similar News