ಹಿಜಾಬ್ ಧರಿಸದ ಮಹಿಳೆಯರ ಮೇಲೆ ಕಾನೂನು ಕ್ರಮ: ಇರಾನ್ ನ್ಯಾಯಾಂಗ ಮುಖ್ಯಸ್ಥರ ಎಚ್ಚರಿಕೆ‌

Update: 2023-04-01 16:29 GMT

ಟೆಹ್ರಾನ್, ಎ.1: ಇರಾನ್ ನ ಕಡ್ಡಾಯ ವಸ್ತ್ರಸಂಹಿತೆಯನ್ನು ಉಲ್ಲಂಘಿಸುವ ಮಹಿಳೆಯರ ಸಂಖ್ಯೆ ಹೆಚ್ಚಿರುವಂತೆಯೇ, ಹಿಜಾಬ್ ಧರಿಸದೆ ಸಾರ್ವಜನಿಕ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಮಹಿಳೆಯರ ಮೇಲೆ ಕರುಣೆಯಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದೇಶದ ನ್ಯಾಯಾಂಗ ಮುಖ್ಯಸ್ಥರು ಎಚ್ಚರಿಕೆ ನೀಡಿರುವುದಾಗಿ `ರಾಯ್ಟರ್ಸ್' ವರದಿ ಮಾಡಿದೆ.

ಅನಾವರಣವು ನಮ್ಮ ಮೌಲ್ಯಗಳೊಂದಿಗಿನ ದ್ವೇಷಕ್ಕೆ ಸಮಾನವಾಗಿದೆ. ಅಂತಹ ಅಸಂಗತ ಕೃತ್ಯಗಳನ್ನು ಮಾಡುವವರಿಗೆ ಶಿಕ್ಷೆಯಾಗುತ್ತದೆ ಮತ್ತು ಕರುಣೆಯಿಲ್ಲದೆ ಕಾನೂನು ಕ್ರಮ ಜರಗಿಸಲಾಗುವುದು ಎಂದು ನ್ಯಾಯಾಂಗ ಮುಖ್ಯಸ್ಥ ಗುಲಾಂಹುಸೈನ್ ಮೊಹ್ಸೆನಿ ಎಚ್ಚರಿಕೆ ನೀಡಿದ್ದಾರೆ. ಇರಾನ್ ನ ಆಂತರಿಕ ಸಚಿವಾಲಯ ಹಿಜಾಬ್ ಕಡ್ಡಾಯಗೊಳಿಸಿ ಆದೇಶ ಜಾರಿಗೊಳಿಸಿದ ಬೆನ್ನಲ್ಲೇ ನ್ಯಾಯಾಂಗ ಮುಖ್ಯಸ್ಥರು ಈ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಇರಾನ್ ರಾಷ್ಟ್ರದ ನಾಗರಿಕತೆಯ ಅಡಿಪಾಯ  ಮತ್ತು ಇಸ್ಲಾಮಿಕ್ ಗಣರಾಜ್ಯದ ಪ್ರಾಯೋಗಿಕ ತತ್ವಗಳಲ್ಲಿ ಹಿಜಾಬ್ ಒಂದು ಭಾಗವಾಗಿದೆ. ಈ ವಿಷಯದಲ್ಲಿ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಆಂತರಿಕ ಸಚಿವಾಲಯ ಹೇಳಿದೆ. ಧಾರ್ಮಿಕ ಕಾನೂನಿಗೆ ವಿರುದ್ಧವಾಗಿ ಸಾರ್ವಜನಿಕವಾಗಿ ಸಂಭವಿಸುವ ಯಾವುದೇ ರೀತಿಯ ಅಸಹಜತೆಗಳನ್ನು  ಕಾನೂನು ಜಾರಿ ಅಧಿಕಾರಿಗಳು ನ್ಯಾಯಾಂಗ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು  ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ.

Similar News