ಬ್ರಿಟನ್: ಟಿಕ್‍ಟಾಕ್‍ಗೆ 16 ದಶಲಕ್ಷ ಡಾಲರ್ ದಂಡ;ಕಾರಣ ವೇನು ಗೊತ್ತೇ?
Update: 2023-04-07 22:35 IST
ಲಂಡನ್, ಎ.7: ಮಕ್ಕಳ ವೈಯಕ್ತಿಕ ಮಾಹಿತಿಯ ದುರುಪಯೋಗ ಸೇರಿದಂತೆ `ಮಾಹಿತಿ ರಕ್ಷಣೆ ಕಾಯ್ದೆ'ಯನ್ನು ಉಲ್ಲಂಘಿಸಿದ ಟಿಕ್‍ಟಾಕ್ ವೇದಿಕೆಗೆ ಬ್ರಿಟನ್‍ನ ಮಾಹಿತಿ ಆಯುಕ್ತರ ಇಲಾಖೆ ಸುಮಾರು 16 ದಶಲಕ್ಷ ಡಾಲರ್‍ನಷ್ಟು ದಂಡ ವಿಧಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸಿಎನ್‍ಎನ್ ವರದಿ ಮಾಡಿದೆ.
ಮಕ್ಕಳು ಡಿಜಿಟಲ್ ಮಾಧ್ಯಮವನ್ನು ಬಳಸುವುದಕ್ಕೆ ಕೆಲವು ನಿಯಮಗಳಿವೆ. ನಿಮ್ಮ ಮಕ್ಕಳು ಭೌತಿಕ ಜಗತ್ತಿನಲ್ಲಿ ಇರುವಂತೆಯೇ ಡಿಜಿಟಲ್ ಜಗತ್ತಿನಲ್ಲಿಯೂ ಸುರಕ್ಷಿತವಾಗಿರುವುದನ್ನು ಖಚಿತಪಡಿಸಲು ಕಾನೂನು ಇದೆ. ಆದರೆ ಇದನ್ನು ಟಿಕ್‍ಟಾಕ್ ಪಾಲಿಸಿಲ್ಲ ಎಂದು ಬ್ರಿಟನ್‍ನ ಮಾಹಿತಿ ಆಯುಕ್ತ ಜಾನ್ ಎಡ್ವಡ್ರ್ಸ್ ಹೇಳಿದ್ದಾರೆ.