ಬುರ್ಕಿನಾ ಫಾಸೊ: 44 ನಾಗರಿಕರ ಹತ್ಯೆ
Update: 2023-04-10 23:38 IST
ಒವುಗಡೊವುಗವು, ಎ.10: ಪಶ್ಚಿಮ ಆಫ್ರಿಕಾದ ಬುರ್ಕಿನಾ ಫಾಸೊ ದೇಶದ ಉತ್ತರದ ಹಳ್ಳಿಗಳಲ್ಲಿ ನಡೆದ 2 ಪ್ರತ್ಯೇಕ ದಾಳಿಗಳಲ್ಲಿ ಕನಿಷ್ಟ 44 ನಾಗರಿಕರು ಹತರಾಗಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳನ್ನು ಉಲ್ಲೇಖಿಸಿ ಸಿಎನ್ಎನ್ ವರದಿ ಮಾಡಿದೆ.
ಬೃಹತ್ ಸಂಖ್ಯೆಯಲ್ಲಿದ್ದ ಭಯೋತ್ಪಾದಕರು ಹಳ್ಳಿಗೆ ನುಗ್ಗಿ ದಾಳಿ ನಡೆಸಿದ್ದು ಕನಿಷ್ಟ 44 ಮಂದಿ ಮೃತಪಟ್ಟಿದ್ದು ಇತರ ಹಲವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಗವರ್ನರ್ ರುಡೋಲ್ಫ್ ಸೋರ್ಗೊ ಹೇಳಿದ್ದಾರೆ.