×
Ad

ಕೃತಕ ಬುದ್ಧಿಮತ್ತೆ ಬಳಸಿ ಸಂದರ್ಶನ: ಸಂಪಾದಕರ ವಜಾ

Update: 2023-04-23 23:48 IST

ಬರ್ಲಿನ್: ಕೃತಕ ಬುದ್ಧಿಮತ್ತೆ(ಎಐ) ಬಳಸಿ, ಮೈಕೆಲ್ ಶುಮಾಕರ್‌ರ ಸಂದರ್ಶನ ನಡೆಸಿ ಅದನ್ನು ಪ್ರಕಟಿಸಿದ ಜರ್ಮನ್ ಪತ್ರಿಕೆಯೊಂದರ ಮುಖ್ಯ ಸಂಪಾದಕರನ್ನು ವಜಾಗೊಳಿಸಲಾಗಿದೆ ಎಂದು ‘ಬಿಬಿಸಿ’ ವರದಿ ಮಾಡಿದೆ.

‘ಡಾಯ್ ಅಕ್ಟುಲೆ’ ಎಂಬ ಟ್ಯಾಬ್ಲಾಯ್ಡ್ ಪತ್ರಿಕೆಯ ಮುಖ್ಯ ಸಂಪಾದಕಿ ಆ್ಯನೆ ಹಾಫ್‌ಮನ್ ಖ್ಯಾತ ಫಾರ್ಮುಲಾ ವನ್ ರೇಸರ್(ಕಾರು ರೇಸ್) ಆಗಿದ್ದ ಶೂಮಾಕರ್ ಅವರ ಸಂದರ್ಶನವನ್ನು ಎಐ ಬಳಸಿ ನಡೆಸಿದ್ದರು ಹಾಗೂ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. 

ಆದರೆ ಈ ಲೇಖನವು ಸಪ್ಪೆಯಾಗಿತ್ತು ಮತ್ತು ಕೆಲವೆಡೆ ಅಸಂಬದ್ಧ ಶಬ್ದಗಳು ಸೇರಿಕೊಂಡಿವೆ ಎಂಬ ಓದುಗರ ಪ್ರತಿಕ್ರಿಯೆ ಬಳಿಕ ನಡೆಸಿದ "ಚಾರಣೆಯಲ್ಲಿ ಮುಖ್ಯ ಸಂಪಾದಕಿ ಕೃತಕ ಬುದ್ಧಿಮತ್ತೆ ಬಳಸಿ ಸಂದರ್ಶನ ನಡೆಸಿರುವುದು ದೃಢಪಟ್ಟಿದೆ. ತಕ್ಷಣ ಈ ಬಗ್ಗೆ ಶುಮಾಕರ್ ಹಾಗೂ ಓದುಗರಲ್ಲಿ ಕ್ಷಮೆ ಯಾಚಿಸಿ, ಮುಖ್ಯ ಸಂಪಾದಕಿಯನ್ನು ಕೆಲಸದಿಂದ ವಜಾಗೊಳಿಸಿರುವುದಾಗಿ ಪತ್ರಿಕೆಯ ಮುಖ್ಯಸ್ಥರನ್ನು ಉಲ್ಲೇಖಿಸಿದ ಬಿಬಿಸಿ ವರದಿ ಹೇಳಿದೆ.

Similar News