×
Ad

ಅಮೆರಿಕದ ಸುಪ್ರೀಂಕೋರ್ಟ್‍ನಲ್ಲಿ ಟ್ವಿಟರ್, ಗೂಗಲ್‍ಗೆ ಗೆಲುವು

Update: 2023-05-19 23:35 IST

ವಾಷಿಂಗ್ಟನ್, ಮೇ 19: ಇಂಟರ್‌ನೆಟ್ ಸಂಸ್ಥೆಗಳ ವೇದಿಕೆಗಳಲ್ಲಿ ಪೋಸ್ಟ್ ಮಾಡಲಾಗುವ ವರದಿಯಲ್ಲಿ ಒಳಗೊಂಡಿರುವ ವಿಷಯಕ್ಕೆ ಆ ಸಂಸ್ಥೆಗಳನ್ನು ಹೊಣೆಯಾಗಿಸಬೇಕು ಎಂಬ ಅರ್ಜಿಯನ್ನು ಅಮೆರಿಕದ ಸುಪ್ರೀಂಕೋರ್ಟ್ ಗುರುವಾರ ತಳ್ಳಿಹಾಕುವುದರೊಂದಿಗೆ ಟ್ವಿಟರ್ ಮತ್ತು ಗೂಗಲ್‍ಗಳು ಭರ್ಜರಿ ಗೆಲುವು ದಾಖಲಿಸಿವೆ ಎಂದು `ದಿ ಹಿಲ್' ವರದಿ ಮಾಡಿದೆ.

ಭಯೋತ್ಪಾದಕರ ದಾಳಿಯಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದ ಕುಟುಂಬವೊಂದು, ಉಗ್ರರಿಗೆ ನೆರವು ಮತ್ತು ಪ್ರೋತ್ಸಾಹ ನೀಡಿದ್ದಕ್ಕಾಗಿ ಟ್ವಿಟರ್ ಮತ್ತು ಗೂಗಲ್ ಅನ್ನು ಹೊಣೆಯಾಗಿಸಬೇಕು ಎಂದು ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ಸಂದರ್ಭ ವಾದ ಮಂಡಿಸಿದ ಗೂಗಲ್ ` 1996ರ ಸಂವಹನ ಸಭ್ಯತೆಯ ಕಾಯ್ದೆ'ಯ ಸೆಕ್ಷನ್ 230ರ ಪ್ರಕಾರ, ತಮ್ಮ ವೆಬ್‍ಸೈಟ್‍ಗಳಲ್ಲಿ ಅಪ್‍ಲೋಡ್ ಮಾಡಲಾಗಿರುವ ಮೂರನೇ ವ್ಯಕ್ತಿಗಳ ಮಾಹಿತಿಗೆ ಇಂಟರ್‍ ನೆಟ್ ಸೇವೆ ಒದಗಿಸುವವರನ್ನು ಹೊಣೆಯಾಗಿಸುವಂತಿಲ್ಲ' ಎಂದು ಪ್ರತಿಪಾದಿಸಿತು. ವಾದ-ವಿವಾದ ಆಲಿಸಿದ ಬಳಿಕ ಗೂಗಲ್, ಟ್ವಿಟರ್ ಪರ ತೀರ್ಪು ನೀಡಲಾಗಿದೆ ಎಂದು ವರದಿಯಾಗಿದೆ.

Similar News