ಅಮೆರಿಕ-ಚೀನಾ ಯುದ್ಧನೌಕೆಗಳ ಮುಖಾಮುಖಿ

Update: 2023-06-04 18:24 GMT

ಬೀಜಿಂಗ್, ಜೂ.4: ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಅಮೆರಿಕದ ಯುದ್ಧನೌಕೆಯನ್ನು ಹಿಂದಿಕ್ಕಿ ಮುಂದೆ ಸಾಗಿದ ಚೀನಾದ ಯುದ್ಧನೌಕೆಯು ಬಳಿಕ ಸುಮಾರು 140 ಮೀಟರ್ ಎದುರಿನಲ್ಲಿ ‘ಅಸುರಕ್ಷಿತ ರೀತಿ’ಯಲ್ಲಿ ಅಡ್ಡವಾಗಿ ತಿರುಗಿದೆ ಎಂದು ಅಮೆರಿಕದ ಇಂಡೊ-ಪೆಸಿಫಿಕ್ ಕಮಾಂಡ್ ಹೇಳಿದೆ.

ತೈವಾನ್ ಜಲಸಂಧಿಯಲ್ಲಿ ಕೆನಡಾದ ಯುದ್ಧನೌಕೆ ಮತ್ತು ಅಮೆರಿಕದ ಯುದ್ಧನೌಕೆ ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ಅಮೆರಿಕದ ಯುದ್ಧನೌಕೆಯನ್ನು ಹಿಂದಿಕ್ಕಿ ಮುಂದೆ ಸಾಗಿದ ಚೀನಾದ ಯುದ್ಧನೌಕೆ ಸುಮಾರು 140 ಮೀಟರ್ ಎದುರು ಸಾಗಿ ಹಠಾತ್ ಅಡ್ಡತಿರುಗಿದೆ. ಆಗ ಸಂಭಾವ್ಯ ಡಿಕ್ಕಿಯನ್ನು ತಪ್ಪಿಸಲು ಅಮೆರಿಕದ ಯುದ್ಧನೌಕೆಯ ವೇಗವನ್ನು ತಗ್ಗಿಸಲಾಗಿದೆ ಎಂದು ಕೆನಡಾದ ಮಾಧ್ಯಮ ವರದಿ ಮಾಡಿದ್ದು ಈ ಕುರಿತ ವೀಡಿಯೊವನ್ನು ಪ್ರಕಟಿಸಿದೆ. ಕ್ರಿಯೆಗಳು ಪದಗಳಿಗಿಂತ ಜೋರಾಗಿ ಮಾತನಾಡುತ್ತದೆ. ತೈವಾನ್ ಜಲಸಂಧಿಯ ಸುತ್ತ, ಪೂರ್ವ ಮತ್ತು ದಕ್ಷಿಣಚೀನಾ ಸಮುದ್ರ ವ್ಯಾಪ್ತಿಯಲ್ಲಿ ಚೀನಾ ಸೇನೆಯ ಅಪಾಯಕಾರಿ ವರ್ತನೆ ಇದಕ್ಕೆ ನಿದರ್ಶನವಾಗಿದೆ ಎಂದು ಅಮೆರಿಕದ ರಕ್ಷಣಾ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

Similar News