ಬೆಂಕಿ ಹಿಡಿದ ಬಸ್‍ನಿಂದ ಮಕ್ಕಳನ್ನು ರಕ್ಷಿಸಿದ ಗರ್ಭಿಣಿ ಚಾಲಕಿ:‌ ಶೌರ್ಯಕ್ಕೆ ವ್ಯಾಪಕ ಪ್ರಶಂಸೆ !

Update: 2023-06-05 17:31 GMT

ವಾಷಿಂಗ್ಟನ್: ಅಮೆರಿಕದ ಶಾಲೆಯೊಂದರ ಬಸ್ ನಲ್ಲಿ ಚಾಲಕಿಯಾಗಿರುವ ಗರ್ಭಿಣಿ ಮಹಿಳೆ ತೋರಿದ ಸಮಯಪ್ರಜ್ಞೆ ಮತ್ತು ಧೈರ್ಯದಿಂದ ಬಸ್ ನಲ್ಲಿದ್ದ 37 ಮಕ್ಕಳ ಪ್ರಾಣ ಉಳಿದಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. 

ಇಮುನೆಕ್ ವಿಲಿಯಮ್ಸ್ ಎಂಬ ಮಹಿಳೆ ಮಿಲ್ವಾಕೀ ಅಕಾಡೆಮಿ ಆಫ್ ಸೈಯನ್ಸ್ ಶಾಲೆಯ ಬಸ್ಸಿನ ಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೇ 31ರಂದು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಾಗ ಬಸ್ಸಿನ ಇಂಜಿನ್ ನಲ್ಲಿ ಹೊಗೆ ಬರುತ್ತಿದ್ದುದನ್ನು ಗಮನಿಸಿ, ತಕ್ಷಣ ಬಸ್ಸನ್ನು ರಸ್ತೆ ಪಕ್ಕ ನಿಲ್ಲಿಸಿ ಬಸ್ಸಿನಲ್ಲಿದ್ದ ಮಕ್ಕಳನ್ನು ಕೆಳಗಿಳಿಸಿದ್ದಾಳೆ.

ಕೆಲವೇ ಕ್ಷಣಗಳಲ್ಲಿ ಬಸ್ಸು ಬೆಂಕಿಗೆ ಆಹುತಿಯಾಗಿದೆ. ಆದರೆ ಇಮುನೆಕ್ ತೋರಿದ ಸಾಹಸದಿಂದ ಹಲವು ಮಕ್ಕಳ ಜೀವ ಉಳಿದಿದೆ ಎಂದು ಪತ್ರಿಕೆಯ ವರದಿ ಹೇಳಿದೆ

Similar News