ಬಾಂಗ್ಲಾ: ರಸ್ತೆ ಅಪಘಾತದಲ್ಲಿ ಕನಿಷ್ಟ 13 ಮಂದಿ ಮೃತ್ಯು

Update: 2023-06-07 17:24 GMT

ಢಾಕ : ಬಾಂಗ್ಲಾದೇಶದ ನಝೀರ್ ಬಜಾರ್ ಪ್ರದೇಶದಲ್ಲಿ ಸಿಲ್ಹೆಟ್-ಢಾಕಾ ಹೆದ್ದಾರಿಯಲ್ಲಿ ಟ್ರಕ್ ಮತ್ತು ವ್ಯಾನ್ ನಡುವೆ ನಡೆದ ಅಪಘಾತದಲ್ಲಿ ಕನಿಷ್ಟ 13 ಮಂದಿ ಮೃತಪಟ್ಟು ಇತರ 9 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಮರಳು ಸಾಗಿಸುತ್ತಿದ್ದ ಟ್ರಕ್ ಮತ್ತು ನಿರ್ಮಾಣ ಕಾರ್ಮಿಕರನ್ನು ಸಾಗಿಸುತ್ತಿದ್ದ ವ್ಯಾನ್ ಕುತುಬ್ಪುರ ಪ್ರದೇಶದಲ್ಲಿ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದಿಂದಾಗಿ ಸುಮಾರು 3 ಗಂಟೆ ಹೆದ್ದಾರಿಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು ಎಂದು ವರದಿಯಾಗಿದೆ.

Similar News