ದುಬೈ | ಶಾರ್ಜಾದಲ್ಲಿ ಭಾರತದ ಸಾಮಾಜಿಕ ವಿಕಸನ, ಮುಸ್ಲಿಮರು ಕೃತಿ ಬಿಡುಗಡೆ
Update: 2025-11-16 23:10 IST
ಶಾರ್ಜಾ, ನ.16: ಮಂಗಳೂರಿನ ಶಾಂತಿ ಪ್ರಕಾಶನ ಪ್ರಕಟಿಸಿದ ಭಾರತದ ಸಾಮಾಜಿಕ ವಿಕಸನ ಮತ್ತು ಮುಸ್ಲಿಮರು ಎಂಬ ಕೃತಿಯನ್ನು ಖ್ಯಾತ ಲೇಖಕಿ ಹಾಗೂ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಸ್ತಾಕ್ ಅವರು ಶಾರ್ಜಾದಲ್ಲಿ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ನೂರ್ ಅಶ್ಫಾಕ್ ಕಾರ್ಕಳ, ಲೇಖಕ ಇರ್ಶಾದ್ ಮೂಡುಬಿದ್ರೆ, ರಿಯಾಝ್ ಪುತ್ತೂರು, ಅಬ್ದುಲ್ ಸಲಾಮ್ ದೇರಳಕಟ್ಟೆ, ರಫೀಕ್ ಅಲಿ ಕೊಡಗು ಮತ್ತು ಹಾದಿಯ ಮಂಡ್ಯ ಉಪಸ್ಥಿತರಿದ್ದರು.
ಶಾರ್ಜಾ ಅಂತರ್‌ರಾಷ್ಟ್ರೀಯ ಪುಸ್ತಕ ಮೇಳದ 44 ನೆಯ ಆವೃತ್ತಿಯಲ್ಲಿ ಸರಕಾರದ ಅಧಿಕೃತ ಅತಿಥಿಯಾಗಿ ಆಗಮಿಸಿದ ಬಾನು ಮುಸ್ತಾಕ್ ವಿಶ್ವ ವಿಖ್ಯಾತ ಶಾರ್ಜಾ ಪುಸ್ತಕ ಮೇಳದಲ್ಲಿ ಭಾಗವಹಿಸಿ ಮಹಿಳೆಯರ ಅಸ್ತಿತ್ವ, ಜೀವನ ಮತ್ತು ಪ್ರತಿರೋಧ ಎಂಬ ವಿಷಯದಲ್ಲಿ ವಿಷಯ ಮಂಡಿಸಿದರು.