ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಇಸ್ರಾ ಅವರ ಪುಸ್ತಕ ಬಿಡುಗಡೆ
ಸುಳ್ಯದ ಅರಂಬೂರು ಮೂಲದ ಯುವ ಬರಹಗಾರ್ತಿ ಆಯಿಷಾ ಬಶೀರ್ ಇಶ್ರಾ ಅವರ ಚೊಚ್ಚಲ ಕಾದಂಬರಿ ʼದಿ ಬಿಟ್ರಯಲ್ ಆಫ್ ದಿ ಕಿಂಗ್ಡಮ್ʼ ಅನ್ನು ವಿಶ್ವದ ಅತ್ಯಂತ ದೊಡ್ಡ ಪುಸ್ತಕ ಮೇಳವಾದ ಶಾರ್ಜಾ ಅಂತರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು.
ಶಾರ್ಜಾ ಸರ್ಕಾರದ ಧಾರ್ಮಿಕ ಕಾರ್ಯಲಯದ ನಿರ್ದೇಶಕರು ಮತ್ತು ರಾಜ ವಂಶಸ್ಥರಾದ ಶೇಖ್ ಅಬ್ದುಲ್ಲಾ ಬಿನ್ ಮೊಹಮ್ಮದ್ ಅಲ್ ಖಾಸಿಮಿಯವರು ಪುಸ್ತಕ ಬಿಡುಗಡೆಗೊಳಿಸಿದರು.
ಶಾರ್ಜಾ ಜೇಮ್ಸ್ ಮಿಲೇನಿಯಂ ಸ್ಕೂಲಿನ ಪ್ರಾಂಶುಪಾಲರಾದ ಲಿನಿ ಶಿವಪ್ರಸಾದ್ ಪ್ರಥಮ ಪ್ರತಿ ಸ್ವೀಕರಿಸಿದರು. ಸಯ್ಯದ್ ಪಾಣಕ್ಕಾಡ್ ಮುನವ್ವರಲಿ ಶಿಹಾಬ್ ತಂಙಳ್, ಯುಎಇಯ ಖ್ಯಾತ ಬರಹಗಾರ, ದಾರ್ ಅಲ್ ಯಾಸ್ಮಿನ್ ಪ್ರಕಾಶನದ ಮುಖ್ಯಸ್ಥ ಡಾ. ಮರಿಯಂ ಅಲ್ ಶೆಣಾಸಿ, ಕ್ಯಾಲಿಕಟ್ ಯೂನಿವರ್ಸಿಟಿಯ ವಿಶ್ರಾಂತ ಕುಲಪತಿ - ಇತಿಹಾಸಗಾರ ಡಾ. ಕೆ. ಕೆ. ಎನ್ ಕುರುಪ್, ಶಾರ್ಜಾದ ಉದ್ಯಮಿ ಶಂಸುದ್ದೀನ್ ಬಿನ್ ಮೊಹಮ್ಮದ್, ಶಾರ್ಜಾ ಇಂಡಿಯನ್ ಆಶೋಸಿಯೇಷನ್ ನ ಅಧ್ಯಕ್ಷರಾದ ನಿಝರ್ ತಳಂಗರ, ಸಿಲ್ವರ್ ಹೋಂ ರಿಯಲ್ ಎಸ್ಟೇಟ್ ನ ನಿರ್ದೇಶಕ ವಿ ಟಿ ಸಲೀಂ. ಮುನೀರ್ ಅಲ್ ವಫಾ, ಲಿಪಿ ಪಬ್ಲಿಕೇಷನ್ ನ ಎಂ.ಡಿ ಅಕ್ಬರ್ ಅಲಿ ಮೊದಲಾದವರು ಉಪಸ್ಥಿತರಿದ್ದರು.
ಶಾರ್ಜಾ ಜೇಮ್ಸ್ ಮಿಲೇನಿಯಂ ಸ್ಕೂಲ್ ನ ವಿದ್ಯಾರ್ಥಿಯಾಗಿರುವ ಇಸ್ರಾ ತನ್ನ 8ನೇ ವಯಸ್ಸಿನಲ್ಲಿ ಸಣ್ಣ ಕಥೆಗಳ ಮತ್ತು ಕಾದಂಬರಿಯ ಎರಡು ಪುಸ್ತಕಗಳನ್ನು ಬರೆದು ಪ್ರಕಟಿಸುವ ಮೂಲಕ ಅತ್ಯಂತ ಕಿರಿಯ ಪ್ರಾಯದ ಬರಹಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಇವರು ಅರಂಬೂರಿನ ಬಶೀರ್ ಮತ್ತು ಹಸೀನಾ ದಂಪತಿಗಳ ಪುತ್ರಿ.