×
Ad

ಟೈಮ್ಸ್ ಹೈಯರ್ ಎಜ್ಯುಕೇಷನ್ ಅವಾರ್ಡ್ಸ್ MENA 2023: ಅತ್ಯುತ್ತಮ ವಿದ್ಯಾರ್ಥಿ ಬೆಂಬಲಕ್ಕಾಗಿ ಜಿಎಂಯುಗೆ ಗೌರವ

Update: 2023-11-16 17:22 IST

ಅಜ್ಮಾನ್ (ಯುಎಎಇ): ಗಮನಾರ್ಹ ಸಾಧನೆಯಲ್ಲಿ ‘ಅತ್ಯುತ್ತಮ ವಿದ್ಯಾರ್ಥಿ ಬೆಂಬಲ’ ವಿಭಾಗದಲ್ಲಿ ಮೆಚ್ಚುಗೆಯನ್ನು ಗಳಿಸುವ ಮೂಲಕ ಅಜ್ಮಾನ್ ಗಲ್ಫ್ ಮೆಡಿಕಲ್ ಯುನಿವರ್ಸಿಟಿ (ಜಿಎಂಯು)ಯು ಟೈಮ್ಸ್ ಹೈಯರ್ ಎಜ್ಯುಕೇಷನ್ (ಟಿಎಚ್ಇ) ಅವಾರ್ಡ್ಸ್ MENA 2023ರಲ್ಲಿ ಗೌರವಕ್ಕೆ ಪಾತ್ರವಾಗಿದೆ.

ಪರಿಗಣನೆಗಾಗಿ ಸಲ್ಲಿಸಿದ್ದ ಯೋಜನೆಗಳನ್ನು ಯುನಿವರ್ಸಿಟಿ ಕ್ವಾಲಿಟಿ ಅಶ್ಯೂರನ್ಸ್ ಆ್ಯಂಡ್ ಇನ್ಸ್ಟಿಟ್ಯೂಷನಲ್ ಎಫೆಕ್ಟಿವ್ನೆಸ್ ಯೂನಿಟ್ ಇಡೀ ಜಿಎಂಯು ಸಮುದಾಯದ ಸಹಭಾಗಿತ್ವದಲ್ಲಿ ಮತ್ತು ವಿವಿ ನಾಯಕತ್ವದ ಮಾರ್ಗದರ್ಶನದಡಿ ಅಭಿವೃದ್ಧಿಗೊಳಿಸಿತ್ತು.

ವಿವಿಗೆ ದೊರೆತ ಗೌರವದ ಕುರಿತು ಮಾತನಾಡಿದ ಕುಲಪತಿ ಪ್ರೊ.ಹೋಸ್ಸಮ್ ಹಾಮ್ದಿ ಅವರು,‘ಟೈಮ್ಸ್ ಹೈಯರ್ ಎಜ್ಯುಕೇಷನ್ MENA ಅವಾರ್ಡ್ಸ್‌ ನಲ್ಲಿ  ನಮ್ಮ ಸಾಧನೆಗಳು ನಿಜಕ್ಕೂ ಗೌರವಪೂರ್ಣವಾಗಿವೆ. ಇದು ನಮ್ಮ ಬೋಧಕ ವೃಂದ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಸಮರ್ಪಣಾ ಮನೋಭಾವ ಮತ್ತು ಪರಿಶ್ರಮವನ್ನು ಹಾಗೂ ತುಂಬೆ ಸಮೂಹದ ಸ್ಥಾಪಕ ಮತ್ತು ಅಧ್ಯಕ್ಷ ಡಾ.ತುಂಬೆ ಮೊಯ್ದಿನ್ ಅವರಿಂದ ನಿರಂತರ ಬೆಂಬಲವನ್ನು ಪ್ರತಿಬಿಂಬಿಸುತ್ತದೆ’ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News