×
Ad

ಖಾಲಿಸ್ತಾನ್ ಪ್ರತ್ಯೇಕತಾವಾದಿಗಳ ವಿರುದ್ಧ ಕ್ರಮ: ಬ್ರಿಟನ್‍ಗೆ ಭಾರತ ಆಗ್ರಹ

Update: 2023-11-16 22:37 IST

Photo: ANI file photo

ಲಂಡನ್: ಬ್ರಿಟನ್‍ನಲ್ಲಿ ಖಾಲಿಸ್ತಾನ್ ಪರ ಉಗ್ರವಾದದ ಬಗ್ಗೆ ಭಾರತದ ಕಳವಳವನ್ನು ವ್ಯಕ್ತಪಡಿಸಿದ ವಿದೇಶಾಂಗ ಸಚಿವ ಎಸ್. ಜೈಶಂಕರ್ , ಅಭಿವ್ಯಕ್ತಿ ಮತ್ತು ವಾಕ್‍ಸ್ವಾತಂತ್ರ್ಯದ ದುರುಪಯೋಗವನ್ನು ತಡೆಯುವಂತೆ ಬ್ರಿಟನ್‍ನ ಪ್ರಮುಖ ಮುಖಂಡರನ್ನು ಆಗ್ರಹಿಸಿದ್ದಾರೆ.

ಬ್ರಿಟನ್‍ಗೆ ನೀಡಿದ ಐದು ದಿನಗಳ ಭೇಟಿಯ ಅಂತಿಮ ದಿನವಾದ ಬುಧವಾರದಂದು ಲಂಡನ್‍ನಲ್ಲಿನ ಭಾರತೀಯ ಹೈಕಮಿಷನ್‍ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಜೈಶಂಕರ್ ` ಖಾಲಿಸ್ತಾನ್ ಪ್ರತ್ಯೇಕತಾವಾದಿಗಳು, ಅವರ ಕೃತ್ಯಗಳನ್ನು ಬೆಂಬಲಿಸುವವರು ಸೇರಿದಂತೆ ವಿವಿಧ ಶಕ್ತಿಗಳ ಹಿಂಸಾತ್ಮಕ ಚಟುವಟಿಕೆಗಳ ಬಗ್ಗೆ ನಾವು ದೀರ್ಘಕಾಲದಿಂದ ಕಳವಳ ಹೊಂದಿದ್ದೇವೆ' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News