×
Ad

ಕೆಂಪು ಸಮುದ್ರದಲ್ಲಿ ಹೌದಿ ದಾಳಿ ಹತ್ತಿಕ್ಕಲು 10 ರಾಷ್ಟ್ರಗಳ ಒಕ್ಕೂಟ ಸ್ಥಾಪಿಸಿದ ಅಮೆರಿಕ

Update: 2023-12-19 23:51 IST

Photo: news18.com 

ವಾಷಿಂಗ್ಟನ್: ಕೆಂಪು ಸಮುದ್ರದಲ್ಲಿ ಜಾಗತಿಕ ವ್ಯಾಪಾರಕ್ಕೆ ಅಡ್ಡಿಯಾಗಿರುವ ಹೌದಿ ದಾಳಿಗಳನ್ನು ಹತ್ತಿಕ್ಕಲು ಅಮೆರಿಕ 10 ರಾಷ್ಟ್ರಗಳ ಒಕ್ಕೂಟವನ್ನು ಪ್ರಕಟಿಸಿದೆ.

ಇರಾನ್ ಬೆಂಬಲಿತ ಹೌದಿ ಬಂಡುಗೋರರು ಕೆಂಪು ಸಮುದ್ರದಲ್ಲಿ ಟ್ಯಾಂಕರ್ಗಳು, ಸರಕು ಹಡಗುಗಳು ಮತ್ತು ಇತರ ಹಡಗುಗಳ ಮೇಲೆ ದಾಳಿಯನ್ನು ಹೆಚ್ಚಿಸಿದ್ದು ಇದು ಇದು ಜಾಗತಿಕ ವ್ಯಾಪಾರದ 12%ದಷ್ಟು ಸಾಗುವ ಸಾರಿಗೆ ಮಾರ್ಗವನ್ನು ದುರ್ಬಲಗೊಳಿಸಿದೆ. ನೌಕಾಯಾನ ಸ್ವಾತಂತ್ರ್ಯದ ತಳಹದಿಯನ್ನು ಎತ್ತಿಹಿಡಿಯ ಬಯಸುವ ದೇಶಗಳು ಈ ಸವಾಲನ್ನು ಎದುರಿಸಲು ಒಗ್ಗೂಡಬೇಕಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಹೇಳಿದ್ದಾರೆ. ಅಮೆರಿಕ, ಬ್ರಿಟನ್, ಬಹ್ರೇನ್, ಕೆನಡಾ, ಫ್ರಾನ್ಸ್, ಇಟಲಿ, ನೆದರ್ಲ್ಯಾಂಡ್ಸ್, ನಾರ್ವೆ, ಸೆಷೆಲ್ಸ್ ಮತ್ತು ಸ್ಪೇನ್ ಒಕ್ಕೂಟದ ಸದಸ್ಯರಾಗಿವೆ ಎಂದವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News