×
Ad

ಕುಟುಂಬದವರು ಮನೆಯಲ್ಲಿದ್ದಾಗಲೇ ಬೆನ್ ಸ್ಟೋಕ್ಸ್ ಮನೆ ದರೋಡೆ!

Update: 2024-10-31 09:00 IST

PC: x.com/ESPNcricinfo

ಲಂಡನ್: ಇಂಗ್ಲೆಂಡ್ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸದಲ್ಲಿದ್ದ ವೇಳೆ, ಕುಟುಂಬ ಸದಸ್ಯರು ಮನೆಯಲ್ಲಿದ್ದಾಗಲೇ ಮುಸುಕುಧಾರಿ ದರೋಡೆಕೋರರು ಮನೆಗೆ ನುಗ್ಗಿ ತಮ್ಮ ಮನೆಯನ್ನು ದರೋಡೆ ಮಾಡಿದ್ದಾರೆ ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಬೆನ್ ಸ್ಟ್ರೋಕ್ ಬಹಿರಂಗಪಡಿಸಿದ್ದಾರೆ.

ಕುಟುಂಬಕ್ಕೆ ಯಾವುದೇ ದೈಹಿಕ ಹಾನಿಯಾಗಿಲ್ಲ. ಆದರೆ ಅಸಂಖ್ಯಾತ ಭಾವನಾತ್ಮಕ ವಸ್ತುಗಳನ್ನು ದರೋಡೆ ಮಾಡಲಾಗಿದೆ ಎಂದು 33 ವರ್ಷದ ಕ್ರಿಕೆಟಿಗ ಹೇಳಿದ್ದಾರೆ. ಪಾಕಿಸ್ತಾನ ವಿರುದ್ಧದ 2ನೇ ಟೆಸ್ಟ್ ಪಂದ್ಯದ ವೇಳೆ ನಡೆದ ಈ ದರೋಡೆಯಲ್ಲಿ ಪತ್ನಿ ಕ್ಲೇರಿ ಮತ್ತು ಮಕ್ಕಳಾದ ಲಿಟನ್ ಹಾಗೂ ಲಿಬ್ಬಿ ಮನೆಯಲ್ಲಿದ್ದರು. ಈ ಪಂದ್ಯವನ್ನು 152 ರನ್ ಅಂತರದಿಂದ ಸೋಲುವ ಮೂಲಕ ಬೆನ್ ಪಡೆ 1-2ರಿಂದ ಸರಣಿ ಸೋತಿತ್ತು.

"ಅಕ್ಟೋಬರ್ 17ರಂದು ಗುರುವಾರ ಸಂಜೆ ಹಲವು ಮಂದಿ ಮುಸುಕುಧಾರಿಗಳು ಕ್ಯಾಸಲ್ ಈಡನ್ ನಲ್ಲಿರುವ ನಮ್ಮ ಮನೆಗೆ ನುಗ್ಗಿ ದರೋಡೆ ಮಾಡಿದ್ದಾರೆ" ಎಂದು ಸಾಮಾಜಿಕ ಜಾಲತಾಣ ಪೋಸ್ಟ್ನಲ್ಲಿ ವಿವರಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News