ಅಮೆರಿಕದ ಸರಕುಗಳ ಮೇಲಿನ ಹೆಚ್ಚುವರಿ ಸುಂಕ ಅಮಾನತು: ಚೀನಾ
Update: 2025-08-12 21:15 IST
PC | REUTERS
ಬೀಜಿಂಗ್, ಆ.12: ಚೀನಾದೊಂದಿಗೆ ಸುಂಕ ಒಪ್ಪಂದದ ಗಡುವನ್ನು ವಿಸ್ತರಿಸುವ ಅಮೆರಿಕ ಅಧ್ಯಕ್ಷರ ಕ್ರಮಕ್ಕೆ ಪ್ರತಿಯಾಗಿ ಅಮೆರಿಕದ ಸರಕುಗಳ ಮೇಲಿನ ಹೆಚ್ಚುವರಿ ಸುಂಕವನ್ನು 90 ದಿನ ಅಮಾನತಿನಲ್ಲಿಡುವುದಾಗಿ ಚೀನಾದ ವಾಣಿಜ್ಯ ಇಲಾಖೆ ಮಂಗಳವಾರ ಘೋಷಿಸಿದೆ.
ವಿಸ್ತರಣೆಯು ಜೂನ್ 5ರ ಫೋನ್ ಕರೆಯ ಸಂದರ್ಭ ಎರಡೂ ರಾಷ್ಟ್ರದ ಮುಖ್ಯಸ್ಥರು ಅನುಮೋದಿಸಿದ ಪ್ರಮುಖ ಒಮ್ಮತವನ್ನು ಮತ್ತಷ್ಟು ಕಾರ್ಯಗತಗೊಳಿಸುವ ಕ್ರಮವಾಗಿದೆ ಮತ್ತು ಜಾಗತಿಕ ಆರ್ಥಿಕತೆಗೆ ಸ್ಥಿರತೆಯನ್ನು ಒದಗಿಸಲಿದೆ ಎಂದು ಹೇಳಿಕೆ ತಿಳಿಸಿದೆ.
ಇದರೊಂದಿಗೆ ವಿಶ್ವದ ಎರಡು ಅಗ್ರಗಣ್ಯ ಆರ್ಥಿಕತೆಗಳ ನಡುವಿನ ಅಪಾಯಕಾರಿ ಆರ್ಥಿಕ ಮುಖಾಮುಖಿ ವಿಳಂಬಿಸಿದಂತಾಗಿದೆ.