×
Ad

375 ವರ್ಷ ನಾಪತ್ತೆಯಾಗಿದ್ದ ‘8ನೇ ಖಂಡ’ದ ಅನ್ವೇಷಣೆ

Update: 2023-09-27 23:59 IST

Photo : tweet

ನ್ಯೂಯಾರ್ಕ್: ಸುಮಾರು 375 ವರ್ಷಗಳಿಂದ ನಾಪತ್ತೆಯಾಗಿದ್ದು ಸರಳ ದೃಷ್ಟಿಗೆ ಕಾಣಸಿಗದ 8ನೇ ಖಂಡವನ್ನು ಭೂವಿಜ್ಞಾನಿಗಳು ಕಂಡುಹಿಡಿದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಝೀಲ್ಯಾಂಡಿಯಾ ಅಥವಾ ‘ತೆ ರಿಯುವ ಮಾವಿ’ ಎಂದು ಹೆಸರಿಸಲಾದ ಈ ಖಂಡದ ಹೊಸದಾಗಿ ಸಂಸ್ಕರಿಸಿದ ನಕ್ಷೆಯನ್ನು  ಭೂವಿಜ್ಞಾನಿಗಳು ಮತ್ತು ಭೂಕಂಪಶಾಸ್ತ್ರಜ್ಞರ ಸಣ್ಣ ತಂಡವು ರಚಿಸಿದೆ. ಸಾಗರತಳದಿಂದ ಮೇಲೆತ್ತಿದ ಕಲ್ಲಿನ ಮಾದರಿಗಳಿಂದ ಪಡೆದ ಡೇಟಾವನ್ನು ಬಳಸಿಕೊಂಡು ಸಂಶೋಧಕರು ಇದನ್ನು ಕಂಡುಹಿಡಿದಿದ್ದಾರೆ. ಸಂಶೋಧನೆಯ ವಿವರ ‘ಟೆಕ್ಟಾನಿಕ್ಸ್’ ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಝೀಲ್ಯಾಂಡಿಯಾವು ಸುಮಾರು 4.9 ದಶಲಕ್ಷ ಚದರ ಮೈಲು ವಿಸ್ತೀರ್ಣದ ಖಂಡವಾಗಿದ್ದು ಮಡಗಾಸ್ಕರ್ ದೇಶಕ್ಕಿಂತ ಸುಮಾರು 6 ಪಟ್ಟು ದೊಡ್ಡದಾಗಿದೆ. ವಾಸ್ತವವಾಗಿ 8 ಖಂಡಗಳಿವೆ ಎಂದು ವಿಜ್ಞಾನಿಗಳು ಹೇಳುತ್ತಿದ್ದರು. ಇದೀಗ ಶೋಧಿಸಲಾಗಿರುವ ವಿಶ್ವದ ಅತ್ಯಂತ ಚಿಕ್ಕ, ತೆಳುವಾದ ಮತ್ತು ಕಿರಿಯ ಖಂಡವೆಂಬ ದಾಖಲೆಗೆ ಪಾತ್ರವಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ.

ನ್ಯೂಝಿಲ್ಯಾಂಡ್ನಂತೆ ಕೆಲವು ದ್ವೀಪಗಳ ಸಮೂಹವಾಗಿರುವ ಹೊಸ ಖಂಡದ 94%ದಷ್ಟು ಭಾಗ ನೀರಿನೊಳಗಿದೆ. ಬಹಳ ಸ್ಪಷ್ಟವಾದ ಸಂಗತಿಯನ್ನು ಬಹಿರಂಗಪಡಿಸಲು ಸ್ಪಲ್ಪ ಸಮಯ ತೆಗೆದುಕೊಳ್ಳಬಹುದು ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ ಎಂದು ಹೊಸ ಖಂಡ ಪತ್ತೆಹಚ್ಚಿದ ಭೂವಿಜ್ಞಾನಿಗಳ ತಂಡದಲ್ಲಿದ್ದ ‘ನ್ಯೂಝಿಲ್ಯಾಂಡ್ ಕ್ರೌನ್ ರಿಸರ್ಚ್ ಇನ್ಸ್ಟಿಟ್ಯೂಟ್’ನ ಭೂವಿಜ್ಞಾನಿ ಆ್ಯಂಡಿ ಟುಲೋಚ್ ಹೇಳಿದ್ದಾರೆ.

ಝೀಲ್ಯಾಂಡಿಯಾ ಮೂಲತಃ ಪ್ರಾಚೀನ ಮಹಾಖಂಡ ಗೊಂಡ್ವಾನಾದ ಭಾಗವಾಗಿತ್ತು. ಇದು ಸುಮಾರು 550 ದಶಲಕ್ಷ ವರ್ಷಗಳ ಹಿಂದೆ ರೂಪುಗೊಂಡಿತು ಮತ್ತು ಮೂಲಭೂತವಾಗಿ ದಕ್ಷಿಣ ಗೋಳಾರ್ಧದ ಭೂಮಿಗಳನ್ನು ಒಟ್ಟುಗೂಡಿಸಿದೆ ಎಂದು ಭೂವಿಜ್ಞಾನಿಗಳ ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News