ಫೆಲೆಸ್ತೀನೀಯರ ಸ್ಥಳಾಂತರಕ್ಕೆ ಈಜಿಪ್ಟ್ ವಿರೋಧ
Update: 2025-08-14 20:37 IST
ಸಾಂದರ್ಭಿಕ ಚಿತ್ರ (PC : NDTV)
ಕೈರೋ, ಆ.14: ಫೆಲೆಸ್ತೀನೀಯರನ್ನು ಗಾಝಾದಿಂದ ಹೊರಗೆ ವರ್ಗಾಯಿಸುವ ಯೋಜನೆಗಳನ್ನು ಈಜಿಪ್ಟ್ ಬಲವಾಗಿ ವಿರೋಧಿಸುತ್ತಿದೆ.
ಇದರಿಂದ ಈಜಿಪ್ಟ್ ನ ಭೂಪ್ರದೇಶದೊಳಗೆ ನಿರಾಶ್ರಿತರ ಒಳಹರಿವು ಹೆಚ್ಚಬಹುದು ಎಂದು ಸರಕಾರ ಆತಂಕ ವ್ಯಕ್ತಪಡಿಸಿದ್ದು ದಕ್ಷಿಣ ಸುಡಾನ್ ಕೂಡಾ ಫೆಲೆಸ್ತೀನೀಯರನ್ನು ಸ್ವೀಕರಿಸಬಾರದು ಎಂದು ಆಗ್ರಹಿಸಿದೆ. ಈ ಮಧ್ಯೆ, ಇಸ್ರೇಲ್ ನ ನಿಯೋಗವೊಂದು ಶೀಘ್ರವೇ ದಕ್ಷಿಣ ಸುಡಾನ್ ಗೆ ಭೇಟಿ ನೀಡಿ ಮಾತುಕತೆ ನಡೆಸಲಿದ್ದು ಅಲ್ಲಿ ಫೆಲೆಸ್ತೀನೀಯರಿಗಾಗಿ ಶಿಬಿರಗಳನ್ನು ಸ್ಥಾಪಿಸುವ ಸಾಧ್ಯತೆಗಳ ಬಗ್ಗೆ ಚರ್ಚಿಸಲಿದೆ ಎಂದು ಅಮೆರಿಕದ ಪರವಾಗಿ ದಕ್ಷಿಣ ಸುಡಾನ್ ನೊಂದಿಗೆ `ಲಾಬಿ' ನಡೆಸುತ್ತಿರುವ ಸಂಸ್ಥೆಯ ಸ್ಥಾಪಕ ಜೋ ಸ್ಲಾವಿಕ್ ಹೇಳಿದ್ದಾರೆ.