×
Ad

ಗಾಝಾ | ಬಹುಮಹಡಿ ಕಟ್ಟಡಗಳು ದಾಳಿಯ ಗುರಿಯಾಗಲಿದೆ: ಇಸ್ರೇಲ್

Update: 2025-09-05 21:22 IST

PC : aljazeera.com

ಜೆರುಸಲೇಂ, ಸೆ.5: ಗಾಝಾ ನಗರದಲ್ಲಿ ಮತ್ತು ವಿಶೇಷವಾಗಿ ಬಹುಮಹಡಿ ಕಟ್ಟಡಗಳಲ್ಲಿರುವ ವಿವಿಧ ರೀತಿಯ ಮೂಲಸೌಕರ್ಯ ತಾಣಗಳಲ್ಲಿ ಹಮಾಸ್ ಸದಸ್ಯರ ವ್ಯಾಪಕ ಚಟುವಟಿಕೆಗಳನ್ನು ಗಮನಿಸಲಾಗಿದೆ.

ಮುಂಬರುವ ದಿನಗಳಲ್ಲಿ ಗಾಝಾ ನಗರದಲ್ಲಿ ಈ ರೀತಿಯ ಮೂಲಸೌಕರ್ಯಗಳಾಗಿ ಪರಿವರ್ತನೆಗೊಂಡಿರುವ ರಚನೆಗಳನ್ನು ಗುರಿಯಾಗಿಸಿ ಇಸ್ರೇಲ್ ಮಿಲಿಟರಿ ದಾಳಿ ನಡೆಸುತ್ತದೆ. ಕ್ಯಾಮರಾಗಳು, ವೀಕ್ಷಣಾ ಕಮಾಂಡ್ ಕೇಂದ್ರಗಳು, ಸ್ನಿಪರ್, ಟ್ಯಾಂಕ್‍ಗಳನ್ನು ಗುರಿಯಾಗಿಸಿ ದಾಳಿ ನಡೆಸುವ ವ್ಯವಸ್ಥೆಗಳು, ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳು ದಾಳಿಯ ಗುರಿಯಾಗುತ್ತದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News