×
Ad

ಶಿಫಾ ಆಸ್ಪತ್ರೆಯ ದಾಳಿಗೆ ಹಮಾಸ್ ಹೊಣೆ : ಇಸ್ರೇಲ್

Update: 2023-11-11 22:34 IST

File Photo

ಗಾಝಾ : ಗಾಝಾದ ಶಿಫಾ ಆಸ್ಪತ್ರೆಯ ಮೇಲೆ ನಡೆದ ದಾಳಿಯನ್ನು ಹಮಾಸ್ ನಡೆಸಿದೆ. ಹಮಾಸ್ ಗುಂಪು ಹಾರಿಸಿದ ಗ್ರೆನೇಡ್ ಗುರಿತಪ್ಪಿ ಆಸ್ಪತ್ರೆಗೆ ಅಪ್ಪಳಿಸಿದೆ ಎಂದು ಇಸ್ರೇಲ್ ರಕ್ಷಣಾ ಪಡೆ(ಐಡಿಎಫ್) ಪ್ರತಿಪಾದಿಸಿದೆ.

ಆಸ್ಪತ್ರೆ ಮೇಲಿನ ದಾಳಿಗೆ ಹಮಾಸ್‍ನನ್ನು ಖಂಡಿಸಬೇಕು, ಇಸ್ರೇಲನ್ನು ಅಲ್ಲ. ಗಾಝಾ ನಗರದಲ್ಲಿನ ಅಲ್-ಶಿಫಾ ಆಸ್ಪತ್ರೆಯ ಬಳಿ ಕಾರ್ಯನಿರ್ವಹಿಸುತ್ತಿದ್ದ ಐಡಿಎಫ್ ಪಡೆಯತ್ತ ಹಮಾಸ್ ಉಡಾಯಿಸಿದ ರಾಕೆಟ್‍ನಿಂದ ಚಿಮ್ಮುವ ಗ್ರೆನೇಡ್ ಗುರಿತಪ್ಪಿ ಆಸ್ಪತ್ರೆಗೆ ಅಪ್ಪಳಿಸಿರುವುದು ದೃಢಪಟ್ಟಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.

ಗಾಝಾ ನಿವಾಸಿಗಳ ರಕ್ಷಣೆಗೆ ಇಸ್ರೇಲ್ ಸಾಧ್ಯವಿರುವುದನ್ನೆಲ್ಲಾ ಮಾಡುತ್ತಿದೆ. ಆದರೆ ನಿವಾಸಿಗಳು ಸುರಕ್ಷಿತ ಸ್ಥಳಕ್ಕೆ ತೆರಳದಂತೆ ಹಮಾಸ್ ತಡೆಯುತ್ತಿದೆ. ಸ್ಥಳೀಯ ನಿವಾಸಿಗಳನ್ನು ಹಮಾಸ್ ಮಾನವ ಗುರಾಣಿಗಳಂತೆ ಬಳಸುತ್ತಿದೆ ಎಂದು ಶುಕ್ರವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News