×
Ad

ಇಸ್ರೇಲ್ ನತ್ತ ಹಿಜ್ಬುಲ್ಲಾ ರಾಕೆಟ್ ದಾಳಿ

Update: 2023-11-23 22:06 IST

ಸಾಂದರ್ಭಿಕ ಚಿತ್ರ Photo- PTI

ಬೈರೂತ್: ಉತ್ತರ ಇಸ್ರೇಲ್ ನ ಸೇನಾ ನೆಲೆಯತ್ತ ಹಿಜ್ಬುಲ್ಲಾ ಸಶಸ್ತ್ರ ಹೋರಾಟಗಾರರ ಗುಂಪು ಗುರುವಾರ 50ಕ್ಕೂ ಅಧಿಕ ರಾಕೆಟ್ ಗಳನ್ನು ಪ್ರಯೋಗಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

ಬುಧವಾರ ಇಸ್ರೇಲ್ ವಾಯುಪಡೆ ದಕ್ಷಿಣ ಲೆಬನಾನ್ನಲ್ಲಿರುವ ಹಿಜ್ಬುಲ್ಲಾ ನೆಲೆಯ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾದ ಐದು ಮಂದಿ ಉನ್ನತ ಮುಖಂಡರು ಹತರಾಗಿದ್ದು ಇದಕ್ಕೆ ಪ್ರತಿಯಾಗಿ ಹಿಜ್ಬುಲ್ಲಾ ಗುಂಪು ಪ್ರತಿದಾಳಿ ತೀವ್ರಗೊಳಿಸಿದೆ. ಇಸ್ರೇಲ್-ಲೆಬನಾನ್ ಗಡಿಯಲ್ಲಿ ತಾನು ನಿರಂತರ ಆಕ್ರಮಣ ನಡೆಸಿರುವುದರಿಂದ ಗಾಝಾ ಪಟ್ಟಿಯಲ್ಲಿ ಇಸ್ರೇಲ್ನ ಕಾರ್ಯಾಚರಣೆ ನಿಧಾನಗೊಂಡಿದೆ. ಇಸ್ರೇಲ್ ಸೇನೆಯ ಗಮನ ಲೆಬನಾನ್ ಗಡಿಯತ್ತ ತಿರುಗಿದೆ ಎಂದು ಹಿಜ್ಬುಲ್ಲಾ ಮುಖಂಡರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News