×
Ad

ವಿಮಾನದಲ್ಲಿ ಸಹ ಪ್ರಯಾಣಿಕನ ಮೇಲೆ ಹಲ್ಲೆ : ಭಾರತೀಯ ಮೂಲದ ವ್ಯಕ್ತಿ ಅಮೆರಿಕದಲ್ಲಿ ಬಂಧನ

Update: 2025-07-04 10:35 IST

Photo | NDTV

ಹೊಸದಿಲ್ಲಿ : ಫಿಲಿಡೆಲ್ಫಿಯಾದಿಂದ ಫ್ಲೋರಿಡಾದ ಮಿಯಾಮಿಗೆ ಹಾರಾಟ ನಡೆಸುತ್ತಿದ್ದಾಗ ಸಹ ಪ್ರಯಾಣಿಕನೋರ್ವನ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಭಾರತೀಯ ಮೂಲದ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ.

ಜೂನ್ 30 ರಂದು ʼಫ್ರಾಂಟಿಯರ್ ಏರ್‌ಲೈನ್ಸ್‌ʼ ವಿಮಾನದಲ್ಲಿ ನ್ಯೂಯಾರ್ಕ್ ನಿವಾಸಿ ಇಶಾನ್ ಶರ್ಮಾ ಮತ್ತು ಕೀನು ಇವಾನ್ಸ್ ಜಗಳವಾಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶರ್ಮಾ ಮತ್ತು ಇವಾನ್ಸ್ ಪರಸ್ಪರ ಕುತ್ತು ಹಿಡಿದು ಹಲ್ಲೆ ನಡೆಸುತ್ತಿರುವುದು ಮತ್ತು ಸಹ ಪ್ರಯಾಣಿಕರು ಅವರಲ್ಲಿ ಜಗಳ ನಿಲ್ಲಿಸುವಂತೆ ಕೇಳಿಕೊಳ್ಳುತ್ತಿರುವುದು ಕಂಡು ಬಂದಿದೆ.

ಜಗಳ ಉದ್ದೇಶಪೂರ್ವಕವಾಗಿರಲಿಲ್ಲ. ಶರ್ಮಾ ತನ್ನ ಬಳಿಗೆ ಬಂದು ಕತ್ತು ಹಿಡಿದು ಹಲ್ಲೆ ನಡೆಸಿದ್ದಾನೆ ಎಂದು ಇವಾನ್ಸ್ ಪೊಲೀಸರಿಗೆ ತಿಳಿಸಿದ್ದಾನೆ ಎಂದು ವರದಿಯಾಗಿದೆ.

ಇಶಾನ್ ಶರ್ಮಾನನ್ನು ವಿಮಾನ ಲ್ಯಾಂಡಿಂಗ್ ಆದ ಕೂಡಲೇ ವಶಕ್ಕೆ ಪಡೆದು ಆತನ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಫ್ರಾಂಟಿಯರ್ ಏರ್‌ಲೈನ್ಸ್‌ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News