ಯೆಮನ್‌ನ ರಾಜಧಾನಿ ಮೇಲೆ ಇಸ್ರೇಲ್‌ನಿಂದ ವೈಮಾನಿಕ ದಾಳಿ
Update: 2025-08-24 20:52 IST
PC : X \ @officialrnintel
ಯೆಮನ್ : ಹೌತಿ ನಿಯಂತ್ರಣದಲ್ಲಿರುವ ಯೆಮನ್ ರಾಜಧಾನಿ ಸನಾ ನಗರದಲ್ಲಿರುವ ಪ್ರಮುಖ ವಿದ್ಯುತ್ ಹಾಗೂ ಇಂಧನ ಕೇಂದ್ರಗಳ ಮೇಲೆ ಇಸ್ರೇಲ್ ಸೇನೆ ರವಿವಾರ ವಾಯು ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.
ಸನಾ ನಗರದಲ್ಲಿನ ಒಂದು ವಿದ್ಯುತ್ ಸ್ಥಾವರ ಮತ್ತು ಪೆಟ್ರೋಲ್ ಬಂಕ್ ಮೇಲೆ ಬಾಂಬ್ ದಾಳಿ ನಡೆದಿದೆ ಎಂದು ಹೌತಿ ಮಾಧ್ಯಮ ಕಚೇರಿ ಮಾಹಿತಿ ನೀಡಿದೆ. ಅಧ್ಯಕ್ಷರ ಭವನದ ಬಳಿ ದೊಡ್ಡ ಸ್ಫೋಟಗಳ ಶಬ್ದ ಕೇಳಿಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಕೂಡ ಯೆಮನ್ ಮೇಲೆ ಇಸ್ರೇಲ್ ದಾಳಿ ನಡೆಸಿರುವುದನ್ನು ದೃಢಪಡಿಸಿದೆ.
🇾🇪🇮🇱⚡- Ammunition and oil depots, along with the Presidential Palace, were targeted by Israeli airstrikes against Sana'a, Ansarullah-controlled Yemen. https://t.co/sv9iLCZml8 pic.twitter.com/rcNS3lTgCg
— Rerum Novarum // Intel, Breaking News, and Alerts (@officialrnintel) August 24, 2025