ಇಸ್ರೇಲ್- ಇಯು ವ್ಯಾಪಾರ ಒಪ್ಪಂದ ಅಮಾನತಿಗೆ ಸ್ವೀಡನ್ ಆಗ್ರಹ
Update: 2025-07-31 21:42 IST
ಸ್ವೀಡನ್ | PC : X
ಸ್ಟಾಕ್‍ಹೋಂ, ಜು.31: ಗಾಝಾದಲ್ಲಿನ ಯುದ್ಧದಲ್ಲಿ ಇಸ್ರೇಲ್‍ನ ವರ್ತನೆಯ ಹಿನ್ನೆಲೆಯಲ್ಲಿ ಆ ದೇಶದೊಂದಿಗಿನ ವ್ಯಾಪಾರ ಒಪ್ಪಂದವನ್ನು ಯುರೋಪಿಯನ್ ಯೂನಿಯನ್(ಇಯು) ಅಮಾನತುಗೊಳಿಸಬೇಕು ಎಂದು ಸ್ವೀಡನ್ ಗುರುವಾರ ಆಗ್ರಹಿಸಿದೆ.
ಗಾಝಾದಲ್ಲಿನ ಪರಿಸ್ಥಿತಿ ಸಂಪೂರ್ಣ ಭಯಾನಕವಾಗಿದೆ ಮತ್ತು ಇಸ್ರೇಲ್ ತನ್ನ ಮೂಲಭೂತ ಕಟ್ಟುಪಾಡುಗಳು ಮತ್ತು ತುರ್ತು ಸಹಾಯದ ಬಗ್ಗೆ ಒಪ್ಪಂದಗಳನ್ನು ಪೂರೈಸುವಲ್ಲಿ ವಿಫಲವಾಗಿದೆ. ಆದ್ದರಿಂದ ಸಾಧ್ಯವಾದಷ್ಟು ಬೇಗ ಯುರೋಪಿಯನ್ ಯೂನಿಯನ್ ವ್ಯಾಪಾರ ಒಪ್ಪಂದವನ್ನು ಅಮಾನತುಗೊಳಿಸಬೇಕು ಎಂದು ಸ್ವೀಡನ್ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದು ಗಾಝಾಕ್ಕೆ ಅಡ್ಡಿಪಡಿಸದ ಮಾನವೀಯ ನೆರವು ಪೂರೈಕೆಗೆ ಅವಕಾಶ ಕಲ್ಪಿಸುವಂತೆ ಇಸ್ರೇಲ್ ಸರಕಾರವನ್ನು ಆಗ್ರಹಿಸಿದೆ.