×
Ad

ಗಾಝಾ ಆಸ್ಪತ್ರೆಯಿಂದ ಶಿಶುಗಳ ಸ್ಥಳಾಂತರಕ್ಕೆ ಸಿದ್ಧ: ಇಸ್ರೇಲ್

Update: 2023-11-13 00:06 IST

Photo : PTI

ಟೆಲ್ಅವೀವ್ : ಗಾಝಾದ ಅಲ್-ಶಿಫಾ ಆಸ್ಪತ್ರೆಯಿಂದ ಶಿಶುಗಳನ್ನು ಸ್ಥಳಾಂತರಿಸಲು ಸಿದ್ಧ ಎಂದು ಇಸ್ರೇಲ್ ರಕ್ಷಣಾ ಪಡೆ ರವಿವಾರ ಹೇಳಿದೆ.

ಗಾಝಾದಲ್ಲಿ ಮಾನವೀಯ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿರುವ ನಡುವೆಯೇ, ಗಾಝಾದಿಂದ ಈಜಿಪ್ಟ್ಗೆ ತೆರಳಲು ಇರುವ ರಫಾ ಗಡಿದಾಟನ್ನು ರವಿವಾರ ಮತ್ತೆ ತೆರೆಯಲಾಗಿದೆ ಎಂದು ಗಾಝಾದ ಗಡಿ ಪ್ರಾಧಿಕಾರ ರವಿವಾರ ಮಾಹಿತಿ ನೀಡಿದೆ.

ಈ ಮಧ್ಯೆ, ಗಾಝಾದಲ್ಲಿ ಹಮಾಸ್ ಒತ್ತೆಯಾಳಾಗಿ ಇರಿಸಿಕೊಂಡವರ ಬಿಡುಗಡೆಗೆ ಒಪ್ಪಂದ ಸೂತ್ರ ಸಿದ್ಧವಾಗಿದೆ. ಇಸ್ರೇಲಿನ ಜೈಲಿನಲ್ಲಿರುವ ಸುಮಾರು 100 ಫೆಲೆಸ್ತೀನಿಯನ್ ಕೈದಿಗಳ ಬಿಡುಗಡೆಗೆ ಪ್ರತಿಯಾಗಿ ಒತ್ತೆಯಾಳುಗಳನ್ನು ಬಿಡುಗಡೆಗೊಳಿಸುವ ಸೂತ್ರಕ್ಕೆ ಹಮಾಸ್ ಮತ್ತು ಇಸ್ರೇಲ್ ಒಪ್ಪಿದೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News