×
Ad

ಹಸೀನಾ ಬಂಧನಕ್ಕೆ ಖಲಿದಾ ಝಿಯಾ ಆಗ್ರಹ

Update: 2024-08-15 21:04 IST

ಖಲಿದಾ ಝಿಯಾ | PC : NDTV  

ಢಾಕಾ : ಪದಚ್ಯುತ ಪ್ರಧಾನಿ ಶೇಕ್‌ ಹಸೀನಾರನ್ನು ಬಂಧಿಸಿ ವಿಚಾಚರಣೆಗೆ ಗುರಿಪಡಿಸುವಂತೆ ಆಗ್ರಹಿಸಿ ಗುರುವಾರ ಮಾಜಿ ಪ್ರಧಾನಿ ಖಲಿದಾ ಝಿಯಾ ಅವರ ಪಕ್ಷ ದೇಶದಾದ್ಯಂತ ಪ್ರತಿಭಟನಾ ಜಾಥಾ ನಡೆಸಿದೆ.

ರಾಜಧಾನಿ ಢಾಕಾ ಸೇರಿದಂತೆ ಪ್ರಮುಖ ನಗರಗಳಲ್ಲಿ ಪ್ರತಿಭಟನೆ ನಡೆಸಿದ ಝಿಯಾ ಅವರ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷ (ಬಿಎನ್‍ಪಿ), ಬಿಎನ್‍ಪಿಯ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು `ಬಾಂಗ್ಲಾದೇಶದಲ್ಲಿ ಕ್ರೂರ ನರಹತ್ಯೆ ನಡೆಸಿರುವ ಹಸೀನಾ ಹಾಗೂ ಅವರ ಸಹವರ್ತಿಗಳನ್ನು ಬಂಧಿಸಿ ವಿಚಾರಣೆಗೆ ಗುರಿಯಾಗಿಸಬೇಕು' ಎಂದು ಆಗ್ರಹಿಸಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News