ʼಲರ್ನರ್ಸ್ ಲೈಸೆನ್ಸ್ʼ ಪರೀಕ್ಷೆಯಲ್ಲಿ 59 ಬಾರಿ ಫೇಲಾದ ಚಾಲಕ
Update: 2023-12-05 23:48 IST
Photo: freepik
ಲಂಡನ್: ಬ್ರಿಟನ್‌ನ ವೊರ್ಸೆಸ್ಟರ್‌ಶೈರ್ ಕೌಂಟಿಯ ಚಾಲಕನೊಬ್ಬ ಲರ್ನರ್ಸ್ ಲೈಸೆನ್ಸ್(ಚಾಲನೆ ಕಲಿಯುವವರ ಪರವಾನಿಗೆ)ನ ಥಿಯರಿ ಪರೀಕ್ಷೆಯಲ್ಲಿ 59 ಬಾರಿ ಫೇಲಾಗಿ ದಾಖಲೆ ಬರೆದಿದ್ದು ಅಂತಿಮವಾಗಿ 60ನೇ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾನೆ ಎಂದು ಬಿವಿಸಿ ವರದಿ ಮಾಡಿದೆ.
ಬಹು ಆಯ್ಕೆ ವಿಧಾನದ 50 ಪ್ರಶ್ನೆಗಳಲ್ಲಿ 43 ಪ್ರಶ್ನೆಗಳಿಗೆ ಸರಿಯಾದ ಉತ್ತರ ಬರೆದವರು ಥಿಯರಿ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತಾರೆ. ನಂತರ ಅಭ್ಯರ್ಥಿಗಳಿಗೆ 14 ವೀಡಿಯೊ ಕ್ಲಿಪ್‌ಗಳ ಗ್ರಹಿಕೆ ಪರೀಕ್ಷೆ ನೀಡಲಾಗುತ್ತದೆ. ಇದರಲ್ಲಿ ಯಶಸ್ವಿಯಾದವರು ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಬಹುದು.