×
Ad

ಪಾಕ್ ವಾಯುನೆಲೆಯ ಮೇಲೆ ದಾಳಿ ನಡೆಸಿದ 9 ಉಗ್ರರ ಹತ್ಯೆ

Update: 2023-11-04 22:48 IST

Screengrab:X

ಇಸ್ಲಮಾಬಾದ್: ಉತ್ತರ ಪಾಕಿಸ್ತಾನದ ಮಿಯಾನ್ವಾಲಿಯಲ್ಲಿರುವ ವಾಯುಪಡೆ ನೆಲೆಯ ಮೇಲೆ ಶುಕ್ರವಾರ ತಡರಾತ್ರಿ ಉಗ್ರರು ಆತ್ಮಹತ್ಯಾ ದಾಳಿ ನಡೆಸಿದ್ದು ಸೇನೆಯು ನಡೆಸಿದ ಕಾರ್ಯಾಚರಣೆಯಲ್ಲಿ 9 ಮಂದಿ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ‘ರಾಯ್ಟರ್ಸ್’ ವರದಿ ಮಾಡಿದೆ.

ತಾಲಿಬಾನ್ ಜತೆ ಸಂಪರ್ಕವಿರುವ ʼತೆಹ್ರೀಕೆ ಜಿಹಾದ್ʼ ಗುಂಪು ಈ ಆತ್ಮಹತ್ಯಾ ದಾಳಿಯ ಹೊಣೆ ವಹಿಸಿಕೊಂಡಿದೆ. ಬೇಲಿಯಿಂದ ಸುತ್ತುವರಿದ ವಾಯುನೆಲೆಯ ಗೋಡೆಯನ್ನು ಏಣಿ ಬಳಸಿ ಏರಿದ ದಾಳಿಕೋರರು ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ದಾಳಿ ನಡೆಸಿದ್ದು ವಾಯುನೆಲೆಯಲ್ಲಿ ನಿಲ್ಲಿಸಲಾಗಿದ್ದ ನಾಲ್ಕು ವಿಮಾನಗಳಿಗೆ ಹಾನಿಯಾಗಿವೆ. ದಾಳಿ ಮತ್ತು ವಿಮಾನಗಳಿಗೆ ನಷ್ಟವಾಗಿರುವುದನ್ನು ಪಾಕ್ ಸೇನೆ ದೃಢಪಡಿಸಿದ್ದು ಇದೊಂದು ವಿಫಲ ದಾಳಿ ಎಂದು ಬಣ್ಣಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News