×
Ad

ಸುಡಾನ್‍ನಿಂದ ತೆರಳಲು ಚಾಡ್‍ನ 3 ರಾಜತಾಂತ್ರಿಕರಿಗೆ ಸೂಚನೆ

Update: 2023-12-18 23:04 IST

ಖಾರ್ಟಮ್: ಚಾಡ್ ದೇಶದ ಮೂವರು ರಾಜತಾಂತ್ರಿಕರು ಅನಪೇಕ್ಷಿತ ವ್ಯಕ್ತಿಗಳಾಗಿರುವುದರಿಂದ 72 ಗಂಟೆಯೊಳಗೆ ದೇಶ ಬಿಟ್ಟು ತೆರಳುವಂತೆ ಸುಡಾನ್ ಸರಕಾರ ರವಿವಾರ ಸೂಚಿಸಿದೆ ಎಂದು ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ವರದಿ ಮಾಡಿದೆ.

ದೇಶದಲ್ಲಿರುವ ಚಾಡ್ ರಾಯಭಾರಿ ಕಚೇರಿಯ ಮೂವರು ಸಿಬಂದಿಗಳು ಸುಡಾನ್‍ನ ಆಂತರಿಕ ಬಿಕ್ಕಟ್ಟಿನಲ್ಲಿ ಹಸ್ತಕ್ಷೇಪ ನಡೆಸುತ್ತಿರುವುದು ಗಮನಕ್ಕೆ ಬಂದಿರುವುದರಿಂದ ಅವರನ್ನು ಅನಪೇಕ್ಷಿತ ವ್ಯಕ್ತಿಗಳೆಂದು ಗುರುತಿಸಿ 72 ಗಂಟೆಯೊಳಗೆ ದೇಶದಿಂದ ಹೊರಹೋಗುವಂತೆ ಸೂಚಿಸಲಾಗಿದೆ ಎಂದು ಸುಡಾನ್ ಹೇಳಿದೆ. ಚಾಡ್ ಸರಕಾರ ಸುಡಾನ್‍ನ 4 ರಾಜತಾಂತ್ರಿಕರಿಗೆ ದೇಶಬಿಟ್ಟು ತೆರಳುವಂತೆ ಶನಿವಾರ ಸೂಚಿಸಿದ್ದು ಇದಕ್ಕೆ ಪ್ರತಿಯಾಗಿ ಸುಡಾನ್ ಈ ಕ್ರಮ ಕೈಗೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News