×
Ad

ಪಾಕಿಸ್ತಾನದ ಮೇಲೆ 19% ಸುಂಕ ವಿಧಿಸಿದ ಟ್ರಂಪ್

Update: 2025-08-01 23:04 IST

 ಡೊನಾಲ್ಡ್ ಟ್ರಂಪ್ | PC : PTI 

ವಾಷಿಂಗ್ಟನ್, ಆ.1: ಪಾಕಿಸ್ತಾನದೊಂದಿಗೆ ಮಹತ್ವದ ಇಂಧನ ಸಹಭಾಗಿತ್ವವನ್ನು ಘೋಷಿಸಿದ ಮರುದಿನವೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನದ ಸರಕುಗಳ ಮೇಲೆ 19% ಸುಂಕ ವಿಧಿಸಿದ್ದಾರೆ.

ಇದು ಅವರು ಗುರುವಾರ ಘೋಷಿಸಿರುವ `ವಿಮೋಚನಾ ದಿನ' ಸುಂಕದ ವಿಸ್ತರಿತ ಭಾಗವಾಗಿದೆ. ನೂತನ ಸುಂಕ ದರವು ಆಗಸ್ಟ್ 7ರಂದು ಬೆಳಿಗ್ಗೆ 12:01 ಗಂಟೆಯಿಂದ (ಅಮೆರಿಕ ಕಾಲಮಾನ) ಜಾರಿಗೆ ಬರುತ್ತದೆ. ಈ ಹಿಂದೆ ಪಾಕಿಸ್ತಾನದ ಮೇಲೆ 29% ಸುಂಕ ವಿಧಿಸಲಾಗಿತ್ತು. ಅಮೆರಿಕ ವಿಧಿಸಿದ ಆಗಸ್ಟ್ 1ರ ಗಡುವು ಮುಕ್ತಾಯಗೊಳ್ಳುವ ಅಂತಿಮ ಕ್ಷಣದಲ್ಲಿ ವ್ಯಾಪಾರ ಒಪ್ಪಂದ ಮಾಡಿಕೊಂಡ ಕಾರಣ ಗುರುವಾರ ಬಿಡುಗಡೆಗೊಂಡ ಅಂತಿಮ ಪಟ್ಟಿಯಲ್ಲಿ ಪಾಕಿಸ್ತಾನದ ಮೇಲಿನ ಸುಂಕವನ್ನು 19%ಕ್ಕೆ ಇಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News