×
Ad

ರಶ್ಯದ ಮೇಲೆ ಡ್ರೋನ್ ಸುರಿಮಳೆಗರೆದ ಉಕ್ರೇನ್

Update: 2025-08-24 21:14 IST

ಕೀವ್, ಆ.24: ರಶ್ಯದ ಮೇಲೆ ಶನಿವಾರ ತಡರಾತ್ರಿಯಿಂದ ಸರಣಿ ಡ್ರೋನ್ ದಾಳಿ ನಡೆಸಿದ್ದು ಕಸ್ರ್ಕ್ ಪರಮಾಣು ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಉಕ್ರೇನ್‍ ನ ಅಧಿಕಾರಿಗಳು ರವಿವಾರ ಹೇಳಿದ್ದಾರೆ.

ಪಶ್ಚಿಮ ರಶ್ಯದ ಕಸ್ರ್ಕ್ ಪ್ರದೇಶದಲ್ಲಿರುವ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ಆಗಸದಲ್ಲಿದ್ದ ಉಕ್ರೇನ್‍ ನ ಡ್ರೋನ್ ಅನ್ನು ತನ್ನ ವಾಯು ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದ್ದು ಡ್ರೋನ್‍ ನ ಅವಶೇಷ ಬಿದ್ದು ಸ್ಥಾವರದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಬೆಂಕಿಯನ್ನು ನಿಯಂತ್ರಿಸಲಾಗಿದ್ದು ಯಾವುದೇ ಹಾನಿ ಸಂಭವಿಸಿಲ್ಲ. ಸೈಂಟ್ ಪೀಟರ್ಸ್‍ ಬರ್ಗ್ ಸೇರಿದಂತೆ ಹಲವು ನಗರಗಳ ಮೇಲೆ ಹಾರುತ್ತಿದ್ದ ಡ್ರೋನ್‍ ಗಳನ್ನು ಹೊಡೆದುರುಳಿಸಲಾಗಿದೆ. ಫಿನ್ಲ್ಯಾಂಡ್ ಕೊಲ್ಲಿಯ ಬಳಿಯಿರುವ ಉಸ್ಟ್-ಲುಗಾ ಬಂದರಿನ ಮೇಲೆ ಹಾರುತ್ತಿದ್ದ 10 ಡ್ರೋನ್‍ಗಳನ್ನು ಧ್ವಂಸಗೊಳಿಸಲಾಗಿದೆ ಎಂದು ರಶ್ಯದ ಸೇನಾಪಡೆ ಹೇಳಿದೆ.

ಈ ಮಧ್ಯೆ, ಶನಿವಾರ ತಡರಾತ್ರಿ ರಶ್ಯವು ಬ್ಯಾಲಿಸ್ಟಿಕ್ ಕ್ಷಿಪಣಿ ಹಾಗೂ 72 ಡ್ರೋನ್‍ಗಳನ್ನು ಪ್ರಯೋಗಿಸಿದ್ದು ಇದರಲ್ಲಿ 48 ಡ್ರೋನ್‍ಗಳನ್ನು ಹೊಡೆದುರುಳಿಸಲಾಗಿದೆ. ಪೂರ್ವದ ನಿಪ್ರೊಪೆಟ್ರೋವ್ಸ್ಕ್ ಪ್ರಾಂತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News