×
Ad

ಉತ್ತರ ಪ್ರದೇಶ | ಹಳಿಯ ಮೇಲಿಟ್ಟಿದ್ದ ಕಲ್ಲಿಗೆ ರೈಲು ಡಿಕ್ಕಿ

Update: 2024-09-28 21:37 IST

PC : PTI 

ಲಕ್ನೋ : ಹಳಿಯ ಮೇಲಿಟ್ಟಿದ್ದ ಕಲ್ಲಿಗೆ ರೈಲಿನ ಇಂಜಿನ್ ಡಿಕ್ಕಿ ಹೊಡೆದ ಘಟನೆ ಶನಿವಾರ ಉತ್ತರಪ್ರದೇಶದ ಬೈರಿಯ ಪ್ರದೇಶದಲ್ಲಿ ನಡೆದಿದ್ದು, ಯಾವುದೇ ಹಾನಿಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚೆಗೆ ಉತ್ತರ ಪ್ರದೇಶದ ರೈಲ್ವೆ ಹಳಿಗಳ ಮೇಲೆ ಗ್ಯಾಸ್ ಸಿಲಿಂಡರ್ ಗಳು, ಕಂಬಗಳು ಇತ್ಯಾದಿಗಳು ಕಂಡು ಬಂದಿದ್ದ ಹಲವಾರು ಘಟನೆಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಈ ಘಟನೆಯು ಮಹತ್ವ ಪಡೆದುಕೊಂಡಿದೆ.

ಶನಿವಾರ ಬೆಳಗ್ಗೆ 10.25 ಗಂಟೆಗೆ ವಾರಾಣಸಿ-ಬಲ್ಲಿಯ-ಛಾಪ್ರಾ ಮಾರ್ಗದಲ್ಲಿನ ರೈಲ್ವೆ ಹಳಿಯ ಮೇಲೆ ಕಲ್ಲೊಂದು ಪತ್ತೆಯಾಗಿದೆ ಎಂದು ಈಶಾನ್ಯ ರೈಲ್ವೆ ವಲಯದ ಸಾರ್ವಜನಿಕ ಸಂಪರ್ಕಾಧಿಕಾರಿ ಅಶೋಕ್ ಕುಮಾರ್ ತಿಳಿಸಿದ್ದಾರೆ.

ಹಳಿಯ ಮೇಲೆ ಕಲ್ಲಿರುವುದನ್ನು ಕಂಡ ರೈಲಿನ ಲೋಕೋಪೈಲಟ್, ತುರ್ತು ಬ್ರೇಕ್ ಹಾಕಿ ರೈಲನ್ನು ನಿಲ್ಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಪರಿಶೀಲನೆಯ ನಂತರ, ರೈಲು ತನ್ನ ಪ್ರಯಾಣವನ್ನು ಮುಂದುವರಿಸಿತು ಹಾಗೂ ಲೋಕೋಪೈಲಟ್ ಈ ಘಟನೆಯಿಂದ ಯಾವುದೇ ಹಾನಿಯಾಗಿರುವ ಕುರಿತು ವರದಿ ಮಾಡಿಲ್ಲ ಎಂದೂ ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News