×
Ad

ಎಎಫ್‌ಸಿ ಮಹಿಳೆಯರ ಫುಟ್ಬಾಲ್ ಏಶ್ಯನ್ ಕಪ್ 2026 ಅರ್ಹತಾ ಪಂದ್ಯ; ಇರಾಕನ್ನು 5-0 ಯಿಂದ ಸೋಲಿಸಿದ ಭಾರತ

Update: 2025-07-02 21:51 IST

PC :olympics.com

ಚಿಯಂಗ್ ಮೈ (ಥಾಯ್ಲೆಂಡ್): ಥಾಯ್ಲೆಂಡ್‌ ನ ಚಿಯಂಗ್ ಮೈ ನಗರದಲ್ಲಿರುವ ‘700ನೇ ವಾರ್ಷಿಕ ದಿನದ ಸ್ಟೇಡಿಯಮ್’ನಲ್ಲಿ ಬುಧವಾರ ನಡೆದ ಎಎಫ್‌ಸಿ ಮಹಿಳೆಯರ ಏಶ್ಯನ್ ಕಪ್ 2026 ಫುಟ್ಬಾಲ್ ಪಂದ್ಯಾವಳಿಯ ಅರ್ಹತಾ ಪಂದ್ಯವೊಂದರಲ್ಲಿ ಭಾರತ ತಂಡವು ಇರಾಕ್ ತಂಡವನ್ನು 5-0 ಅಂತರದಿಂದ ಸೋಲಿಸಿದೆ. ಇದರೊಂದಿಗೆ ಭಾರತವು ‘ಬಿ’ ಗುಂಪಿನಲ್ಲಿನ ತನ್ನ ಅಗ್ರ ಸ್ಥಾನವನ್ನು ಭದ್ರಗೊಳಿಸಿದೆ.

ಇಲ್ಲಿನ ಸೋಲಿನೊಂದಿಗೆ ಇರಾಕ್ ತಂಡ ಈ ಪಂದ್ಯಾವಳಿಯಿಂದ ಹೊರಬಿದ್ದಿದೆ. ‘ಬಿ’ ಗುಂಪಿನಿಂದ ಈಗಾಗಲೇ ಮಂಗೋಲಿಯ ಮತ್ತು ಟೈಮರ್-ಲೆಸ್ಟೆ ತಂಡಗಳೂ ಹೊರಬಿದ್ದಿವೆ.

ಭಾರತ ತಂಡದ ಪರವಾಗಿ ಸಂಗೀತಾ ಬಸ್ಫೋರೆ, ಮನೀಶಾ ಕಲ್ಯಾಣ್, ಕಾರ್ತಿಕಾ ಅಂಗಮುತ್ತು, ನಿರ್ಮಲಾ ದೇವಿ ಮತ್ತು ರತನ್‌ಬಾಲಾ ದೇವಿ ಗೋಲುಗಳನ್ನು ಬಾರಿಸಿದರು.

ಈ ವಿಜಯದೊಂದಿಗೆ ಭಾರತವು ಮೂರು ಪಂದ್ಯಗಳಿಂದ ಒಂಭತ್ತು ಅಂಕಗಳನ್ನು ಪಡೆದುಕೊಂಡಿದೆ. ಭಾರತವು ತನ್ನ ಅಂತಿಮ ಅರ್ಹತಾ ಸುತ್ತಿನ ಪಂದ್ಯದಲ್ಲಿ ಥಾಯ್ಲೆಂಡ್ ತಂಡವನ್ನು ಎದುರಿಸಲಿದೆ. ಆ ಪಂದ್ಯವು ಗುಂಪಿನ ವಿಜೇತರನ್ನು ನಿರ್ಧರಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News