×
Ad

ರಣಜಿ ಕ್ರಿಕೆಟ್: ಅರ್ಜುನ್ ತೆಂಡೂಲ್ಕರ್‌ಗೆ ಚೊಚ್ಚಲ ಐದು ವಿಕೆಟ್‌ ಗೊಂಚಲು

Update: 2024-11-13 16:02 IST

ಅರ್ಜುನ್‌ ತೆಂಡೂಲ್ಕರ್‌ (Photo: X)

ಪಣಜಿ: ಪೊರ್ವೊರಿಮ್‌ನ ಗೋವಾ ಕ್ರಿಕೆಟ್ ಅಸೋಸಿಯೇಷನ್ ಅಕಾಡೆಮಿ ಮೈದಾನದಲ್ಲಿ ಗೋವಾ ಮತ್ತು ಅರುಣಾಚಲ ಪ್ರದೇಶ ತಂಡಗಳ ನಡುವೆ ನಡೆಯುತ್ತಿರುವ ಪ್ಲೇಟ್ ಹಂತದ ರಣಜಿ ಪಂದ್ಯದಲ್ಲಿ ಬುಧವಾರ ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಚೊಚ್ಚಲ ಐದು ವಿಕೆಟ್‌ ಗೊಂಚಲು ಗಳಿಸಿದರು.

25 ವರ್ಷದ ಎಡಗೈ ವೇಗದ ಬೌಲರ್ ಆದ ಅರ್ಜುನ್ ತೆಂಡೂಲ್ಕರ್, ಕೇವಲ 9 ಓವರ್‌ಗಳಲ್ಲಿ 25 ರನ್ ನೀಡಿ ಐದು ವಿಕೆಟ್ ಕಬಳಿಸಿದರು. ಈ 9 ಓವರ್‌ಗಳಲ್ಲಿ ಮೂರು ಮೇಡನ್ ಓವರ್‌ಗಳೂ ಸೇರಿದ್ದವು. ತಮ್ಮ 17ನೇ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದ ಅರ್ಜುನ್ ತೆಂಡೂಲ್ಕರ್, ಅರುಣಾಚಲ ಪ್ರದೇಶದ ಬ್ಯಾಟಿಂಗ್ ಅನ್ನು ತಮ್ಮ ಪರಿಣಾಮಕಾರಿ ಬೌಲಿಂಗ್ ದಾಳಿಯ ಮೂಲಕ ಧೂಳೀಪಟ ಮಾಡಿದರು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಅರುಣಾಚಲ ಪ್ರದೇಶ ತಂಡದ ಆರಂಭಿಕ ಆಟಗಾರ ನಬಾಮ್ ಹಚಾಂಗ್‌ರನ್ನು ಅರ್ಜುನ್ ತೆಂಡೂಲ್ಕರ್ ತಮ್ಮ ಎರಡನೆ ಓವರ್‌ನಲ್ಲೇ ಔಟ್ ಮಾಡುವ ಮೂಲಕ ಆಘಾತ ನೀಡಿದರು. ನೀಲಂ ಓಬಿ (22) ಹಾಗೂ ಚಿನ್ಮಯ್ ಪಾಟೀಲ್ (3) ಕೊಂಚ ಪ್ರತಿರೋಧ ತೋರಿದರಾದರೂ, 31ನೇ ಓವರ್ ವೇಳೆಗೆ ಕೇವಲ 84 ರನ್ ಗಳಿಸಿದ ಅರುಣಾಚಲ ಪ್ರದೇಶ ತಂಡ ಆಲೌಟಾಯಿತು.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News