×
Ad

2024-25ರ ಹಣಕಾಸು ವರ್ಷದಲ್ಲಿ ಬಿಸಿಸಿಐಗೆ 9,741.7 ಕೋಟಿ ರೂ. ಆದಾಯ: ಐಪಿಎಲ್ ವೊಂದರಿಂದಲೇ ಸಿಂಹಪಾಲು ಲಾಭ

Update: 2025-07-18 21:28 IST

PC : IPL

ಹೊಸದಿಲ್ಲಿ, ಜು.18: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) 2023-24ರ ಹಣಕಾಸು ವರ್ಷದಲ್ಲಿ ದಾಖಲೆಯ 9,741.7 ಕೋಟಿ ರೂ. ಆದಾಯವನ್ನು ಗಳಿಸಿದೆ ಎಂದು ವರದಿಯಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ಟೂರ್ನಿಯೊಂದರಿಂದಲೇ 5,761 ಕೋಟಿ ರೂ. ಆದಾಯ ಹರಿದುಬಂದಿದೆ. ಕ್ರಿಕೆಟ್ ಮಂಡಳಿಯು ಐಪಿಎಲ್ ಯೇತರ ಮಾಧ್ಯಮ ಹಕ್ಕುಗಳಿಂದ ಹೆಚ್ಚುವರಿಯಾಗಿ 361 ಕೋಟಿ ರೂ. ಆದಾಯ ಗಳಿಸಿದೆ ಎಂದು ‘ರೆಡಿಫ್ಯೂಶನ್’ ವರದಿಯಲ್ಲಿ ತಿಳಿಸಿದೆ.

2007ರಲ್ಲಿ ಐಪಿಎಲ್ ಟೂರ್ನಿಯ ಅರಂಭವಾದ ನಂತರ ಅದರ ಯಶಸ್ಸು ಬಿಸಿಸಿಐನ ಆದಾಯ ಹೆಚ್ಚಳದಲ್ಲಿ ನಿರ್ಣಾಯಕ ಪಾತ್ರವಹಿಸಿದೆ. ರಣಜಿ ಟ್ರೋಫಿ ಸಹಿತ ಕ್ರಿಕೆಟ್ ನ ಹಲವು ಸ್ತರದ ಆಟಗಾರರಿಗೆ ಅವಕಾಶಗಳನ್ನು ಒದಗಿಸಿದೆ.

‘‘ಬಿಸಿಸಿಐ 2007ರಲ್ಲಿ ಚಿನ್ನದ ಬಾತುಕೋಳಿಯನ್ನ್ನು ಶೋಧಿಸಿತ್ತು. ಐಪಿಎಲ್ ಇದೀಗ ಬಿಸಿಸಿಐಯನ್ನು ಸಂಪೂರ್ಣ ಆವರಿಸಿದೆ. ಪಂದ್ಯಾವಳಿಯು ಅತ್ಯುತ್ತಮವಾಗಿದ್ದು, ಮಾಧ್ಯಮ ಹಕ್ಕುಗಳು ನಿರಂತರವಾಗಿ ಹೆಚ್ಚುತ್ತಿವೆ. ರಣಜಿ ಟ್ರೋಫಿ ಮಟ್ಟದ ಆಟಗಾರರಿಗೆ ಆಟದ ಮೈದಾನ ಸಿಗುವುದನ್ನು ಐಪಿಎಲ್ ಖಚಿತಪಡಿಸುತ್ತದೆ. ಐಪಿಎಲ್ ಬೆಳೆದಂತೆ ಲಾಭ ಹೆಚ್ಚಾಗುತ್ತದೆ’’ ಎಂದು ವ್ಯಾಪಾರ ತಂತ್ರಜ್ಞ ಹಾಗೂ ಸ್ವತಂತ್ರ ನಿರ್ದೇಶಕ ಲಾಯ್ಡ್ ಮಥಿಯಾಸ್ ‘ದಿ ಹಿಂದೂ ಬಿಸಿನೆಸ್ ಲೈನ್’ಗೆ ತಿಳಿಸಿದರು.

ತನ್ನ ಆದಾಯವನ್ನು ಹೆಚ್ಚಿಸಲು ರಣಜಿ ಟ್ರೋಫಿ, ದುಲೀಪ್ ಟ್ರೋಫಿ ಅಥವಾ ಸಿ.ಕೆ. ನಾಯುಡು ಟ್ರೋಫಿಯಂತಹ ಸಾಂಪ್ರದಾಯಿಕ ಮಾದರಿಯ ಕ್ರಿಕೆಟನ್ನು ವ್ಯಾಪರೀಕರಣಗೊಳಿಸುವ ಅಪಾರ ಸಾಮರ್ಥ್ಯವನ್ನು ಬಿಸಿಸಿಐ ಹೊಂದಿದೆ. ಇದಲ್ಲದೆ ಕ್ರಿಕೆಟ್ ಮಂಡಳಿಯು ಸುಮಾರು 30,000 ಕೋಟಿ ರೂ. ಮೀಸಲು ಹಣವನ್ನು ಹೊಂದಿದೆ. ಇದರಿಂದ ವರ್ಷಕ್ಕೆ 1,000 ಕೋಟಿ ರೂ. ಬಡ್ಡಿ ಬರುತ್ತಿದೆ. ಈ ಆದಾಯವು ಪ್ರಾಯೋಜಕತ್ವಗಳು, ಮಾಧ್ಯಮ ವ್ಯವಹಾರಗಳು ಹಾಗೂ ಪಂದ್ಯದ ದಿನದ ಗಳಿಕೆಯಿಂದಾಗಿ ವಾರ್ಷಿಕವಾಗಿ 10ರಿಂದ 12 ಪ್ರತಿಶತ ಹೆಚ್ಚಾಗಲು ನೆರವಾಗಬಹುದು ಎಂದು ರೆಡಿಫ್ಯೂಶನ್ ನ ಮುಖ್ಯಸ್ಥ ಸಂದೀಪ್ ಗೋಯೆಲ್ ಹೇಳಿದರು.

‘‘ಬಿಸಿಸಿಐನ ಹಣಕಾಸು ಮಾದರಿಯು ಯಶಸ್ವಿಯಾಗಿದೆ ಎಂದು ಸಾಬೀತಾಗಿದೆ. ಐಸಿಸಿ ತನ್ನ ಬಹುಪಾಲು ನಿಧಿಗೆ ಬಿಸಿಸಿಐ ಅನ್ನು ಹೆಚ್ಚು ಅವಲಂಬಿಸಿದೆ. ಐಸಿಸಿ ಆದಾಯವನ್ನು ಸರಿಯಾಗಿ ಗಳಿಸುತ್ತಿಲ್ಲ’’ ಎಂದು ಬ್ರಾಂಡ್ ಫೈನಾನ್ಸ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಜಿಮೋನ್ ಫ್ರಾನ್ಸಿಸ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News