×
Ad

ಇಂಗ್ಲೆಂಡ್ ಎದುರಿನ ಟೆಸ್ಟ್‌ನಲ್ಲಿ ಬುಮ್ರಾ, ಶಮಿ, ಸಿರಾಜ್ ಆಡುವ ಸಾಧ್ಯತೆ

Update: 2023-11-22 22:22 IST

Photo- PTI

ಹೊಸದಿಲ್ಲಿ: ಒಂದು ವೇಳೆ ಎಲ್ಲವೂ ಅಂದುಕೊಂಡಂತೆ ನಡೆದರೆ ಭಾರತದ ವೇಗದ ಬೌಲರ್ ಜಸ್ಟ್ರೀತ್ ಬುಮ್ರಾ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುಹಮ್ಮದ್ ಶಮಿ ಹಾಗೂ ಮುಹಮ್ಮದ್ ಸಿರಾಜ್ ಅವರೊಂದಿಗೆ ಭಾರತದ ಬೌಲಿಂಗ್ ದಾಳಿಯನ್ನು ಮುನ್ನೆಡೆಸಲಿದ್ದಾರೆ.

ಮುಂದಿನ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧ 5 ವಾರಗಳಲ್ಲಿ ನಡೆಯುವ ಐದು ಟೆಸ್ಟ್ ಪಂದ್ಯಗಳಿಗೆ ಮೂರು ವೇಗಿಗಳು ಆವರ್ತನಾ ಮಾದರಿಯಲ್ಲಿ ಆಡುವ ಸಾಧ್ಯತೆಯಿದೆ.

ಬೆನ್ನುನೋವಿ  ನಿಂದಾಗಿ ದೀರ್ಘ ಸಮಯ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ಅನಿವಾರ್ಯವಾಗಿ ವಿರಾಮ ಪಡೆದಿದ್ದ ಬುಮ್ರಾ ಕೆಂಪು ಚೆಂಡಿನಲ್ಲಿ ಕ್ರಿಕೆಟ್(ಟೆಸ್ಟ್) ಆಡುವ ಸಾಮರ್ಥ್ಯದ ಕುರಿತು ಪ್ರಶ್ನೆ ಎದ್ದಿದೆ

ಬುಮ್ರಾ ಸಂಪೂರ್ಣ ಫಿಟ್ ಆಗಿದ್ದಾರೆ. ಫಲಿತಾಂಶಗಳು ಎಲ್ಲರಿಗೂ ಕಾಣಿಸುತ್ತಿವೆ. ಅವರು ಇದೀಗ ತಮ್ಮ ಶ್ರೇಷ್ಠ ಫಾರ್ಮ್ಗೆ ಮರಳಿದ್ದಾರೆ. ಟೆಸ್ಟ್ ಪಂದ್ಯಗಳನ್ನು ಆಡಲು ಕಾತರದಿಂದಿದ್ದಾರೆ. ಎಲ್ಲವೂ ಸರಿಯಾಗಿ ನಡೆದರೆ ಬುಮ್ರಾ ಖಂಡಿತವಾಗಿಯೂ ಟಿ-20 ವಿಶ್ವಕಪ್ನಲ್ಲಿ ಆಡಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News