×
Ad

ಭಾರತದ ಮಾಜಿ ನಾಯಕಿ ರಾಣಿ ರಾಂಪಾಲ್ ಹಾಕಿಗೆ ವಿದಾಯ

Update: 2024-10-24 21:05 IST

ರಾಣಿ ರಾಂಪಾಲ್ |  PC : X \ @TheHockeyIndia

ಹೊಸದಿಲ್ಲಿ : ಭಾರತದ ಮಹಿಳೆಯರ ಹಾಕಿ ತಂಡದ ಮಾಜಿ ನಾಯಕಿ ರಾಣಿ ರಾಂಪಾಲ್ ಗುರುವಾರ ನಿವೃತ್ತಿ ಪ್ರಕಟಿಸಿದ್ದಾರೆ. ಈ ಮೂಲಕ ತನ್ನ 16 ವರ್ಷಗಳ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ 4ನೇ ಸ್ಥಾನ ಪಡೆದು ಇತಿಹಾಸ ನಿರ್ಮಿಸಿದ್ದ ಭಾರತ ಹಾಕಿ ತಂಡದ ನಾಯಕತ್ವ ವಹಿಸಿದ್ದ ರಾಣಿ ಅವರು ಈ ವರ್ಷಾಂತ್ಯದಲ್ಲಿ ನಡೆಯಲಿರುವ ಮಹಿಳೆಯರ ಹಾಕಿ ಇಂಡಿಯಾ ಲೀಗ್‌ನಲ್ಲಿ (ಎಚ್‌ಐಎಲ್)ಪಂಜಾಬ್ ಹಾಗೂ ಹರ್ಯಾಣದ ಸೂರ್ಮಾ ಹಾಕಿ ಕ್ಲಬ್‌ನ ಸಲಹೆಗಾರ್ತಿ ಹಾಗೂ ಕೋಚ್ ಆಗಿದ್ದಾರೆ.

ಇದೊಂದು ಅತ್ಯುತ್ತಮ ಪ್ರಯಾಣವಾಗಿತ್ತು. ಭಾರತದ ಪರ ಇಷ್ಟೊಂದು ವರ್ಷಗಳ ಕಾಲ ಆಡುತ್ತೇನೆಂದು ಯೋಚಿಸಿಯೇ ಇರಲಿಲ್ಲ. ನನ್ನ ಬಾಲ್ಯದಿಂದಲೇ ಸಾಕಷ್ಟು ಬಡತನ ನೋಡಿದ್ದೇನೆ. ಆದರೆ, ಏನಾದರೂ ಮಾಡಬೇಕು, ದೇಶವನ್ನು ಪ್ರತಿನಿಧಿಸಬೇಕೆಂಬ ಕಡೆಗೆ ನನ್ನ ಗಮನ ಹರಿಸಿದ್ದೆ ಎಂದು ಪತ್ರಿಕಾಗೋಷ್ಠಿಯಲ್ಲಿ ರಾಣಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News