×
Ad

ಮಾಜಿ ಕ್ರಿಕೆಟಿಗ ಸಲೀಲ್ ಅಂಕೊಲಾ ತಾಯಿಯ ಮೃತದೇಹ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆ

Update: 2024-10-04 23:49 IST

Photo : news9live.com

ಪುಣೆ : ಮಾಜಿ ಕ್ರಿಕೆಟಿಗ ಸಲೀಲ್ ಅಂಕೊಲಾ ಅವರ ತಾಯಿಯ ಮೃತದೇಹ ಕತ್ತು ಸೀಳಿದ ಸ್ಥಿತಿಯಲ್ಲಿ ಪುಣೆಯ ಅಪಾರ್ಟ್‌ಮೆಂಟ್‌ನಲ್ಲಿ ಶುಕ್ರವಾರ ಪತ್ತೆಯಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪುಣೆಯ ಡೆಕ್ಕನ್ ಜಿಮ್‌ ಖಾನಾ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಮಾಲಾ ಅಶೋಕ ಅಂಕೊಲಾ ಅವರ ಮೃತದೇಹ ಶುಕ್ರವಾರ ಮಧ್ಯಾಹ್ನ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಮನೆಕೆಲಸದಾಕೆ ಬಾಗಿಲು ತೆರೆದಾಗ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಮೃತದೇಹ ಕಂಡ ಕೂಡಲೇ ಮಾಲಾ ಅವರ ಸಂಬಂಧಿಕರಿಗೆ ಮಾಹಿತಿ ಮುಟ್ಟಿಸಿದ್ದಾರೆ ಎಂದು ತಿಳಿದು ಬಂದಿದೆ.

ಮಾಲಾ ಅವರು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಕುತ್ತಿಗೆಗೆ ತಾವೇ ಚುಚ್ಚಿಕೊಂಡಿರುವ ಸಾಧ್ಯತೆಯಿದೆ. ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮಧ್ಯಮ ವೇಗದ ಬೌಲರ್ ಸಲೀಲ್ ಅಂಕೊಲಾ 1989ರಿಂದ 1997ರವರೆಗೆ ಭಾರತಕ್ಕಾಗಿ 20 ಅಂತರಾಷ್ಟ್ರೀಯ ಏಕದಿನ ಪಂದ್ಯವಾಡಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News