×
Ad

ಕೊಹ್ಲಿಯ ಜರ್ಸಿ 40 ಲಕ್ಷ ರೂ.ಗೆ ಹರಾಜು

Update: 2024-08-24 23:18 IST

 ವಿರಾಟ್ ಕೊಹ್ಲಿ | PTI 

ಮುಂಬೈ: ಶೋಷಿತ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡುವ ಉದ್ದೇಶದಿಂದ ಸ್ಥಾಪಿಸಲಾಗಿರುವ ವಿಪ್ಲ ಫೌಂಡೇಶನ್‌ಗಾಗಿ ಶುಕ್ರವಾರ ಮುಂಬೈಯಲ್ಲಿ ಭಾರತೀಯ ಕ್ರಿಕೆಟಿಗ ಕೆ.ಎಲ್. ರಾಹುಲ್ ಮತ್ತು ಅವರ ಪತ್ನಿ ಹಾಗೂ ನಟಿ ಅತಿಯಾ ಶೆಟ್ಟಿ ‘ಕ್ರಿಕೆಟ್ ಫಾರ್ ಚಾರಿಟಿ’ ಎಂಬ ಹೆಸರಿನಲ್ಲಿ ಹರಾಜು ಏರ್ಪಡಿಸಿದರು.

ಫೌಂಡೇಶನ್‌ನ ಉದಾತ್ತ ಧ್ಯೇಯಗಳಿಗಾಗಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನ ಹಲವು ತಾರೆಯರು ತಮ್ಮ ಅಮೂಲ್ಯ ವಸ್ತುಗಳನ್ನು ದೇಣಿಗೆ ನೀಡಿದರು.

ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯ ಒಂದು ಜರ್ಸಿ 40 ಲಕ್ಷ ರೂ.ಗೆ ಹರಾಜಾಯಿತು. ಅಷ್ಟೇ ಅಲ್ಲ, ಅವರ ಗ್ಲೌಸ್‌ಗಳು 28 ಲಕ್ಷ ರೂ.ಗೆ ಮಾರಾಟವಾಯಿತು.

ಹರಾಜು ಅಮೋಘ ಯಶಸ್ಸು ಕಂಡಿದ್ದು, 1.93 ಕೋಟಿ ರೂ. ಸಂಗ್ರಹವಾಯಿತು.

ಅದೇ ವೇಳೆ, ರೋಹಿತ್ ಶರ್ಮರ ಬ್ಯಾಟ್ 24 ಲಕ್ಷ ರೂ.ಗೆ ಮಾರಾಟವಾಯಿತು. ಎಮ್.ಎಸ್. ಧೋನಿಯ ಬ್ಯಾಟ್ 13 ಲಕ್ಷ ರೂ.ಗೆ ಬಿಕರಿಯಾದರೆ, ರಾಹುಲ್ ದ್ರಾವಿಡ್‌ರ ಬ್ಯಾಟ್ 11 ಲಕ್ಷ ರೂ.ಗೆ ಮಾರಾಟವಾಯಿತು. ಕೆ.ಎಲ್. ರಾಹುಲ್‌ರ ಜರ್ಸಿಯನ್ನು ಅಭಿಮಾನಿಯೊಬ್ಬರು 11 ಲಕ್ಷ ರೂ.ಗೆ ಖರೀದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News