×
Ad

ಅಕ್ಟೋಬರ್ 15ರಿಂದ ರಣಜಿ ಟ್ರೋಫಿ ಟೂರ್ನಿ ಆರಂಭ?

Update: 2025-06-14 21:05 IST

Ranji Trophy. Photo- Twitter

ಮುಂಬೈ: 2025-26ರ ಆವೃತ್ತಿಯ ರಣಜಿ ಟ್ರೋಫಿ ಟೂರ್ನಿಯು ಅಕ್ಟೋಬರ್ 15ರಂದು ನಡೆಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ದೇಶೀಯ ಋತು, ದುಲೀಪ್ ಟ್ರೋಫಿಯೊಂದಿಗೆ ಆರಂಭವಾಗಲಿದೆ. ಇದರಲ್ಲಿ ವಲಯ ಮಾದರಿಯನ್ನು ಮರು ಅಳವಡಿಸಲಾಗುತ್ತದೆ.

ಬಿಸಿಸಿಐನ ಜೂನಿಯರ್ ಪಂದ್ಯಾವಳಿಗಳು(ಪುರುಷರ ಹಾಗೂ ಮಹಿಳೆಯರ)ಅಕ್ಟೋಬರ್ 9ರಂದು ಆರಂಭವಾಗುವ ಸಾಧ್ಯತೆಯಿದೆ.

2024-25ರ ಆವೃತ್ತಿಯ ರಣಜಿ ಟ್ರೋಫಿ ಋತು ಅಕ್ಟೋಬರ್ 11ರಿಂದ ಆರಂಭವಾಗಿತ್ತು. ಕಳೆದ ವರ್ಷದಂತೆ ಈ ಬಾರಿ ಎರಡು ಹಂತಗಳಲ್ಲಿ ರಣಜಿ ಟ್ರೋಫಿ ಟೂರ್ನಿಯು ನಡೆಯುತ್ತದೆ. ಮೊದಲ ಐದು ಸುತ್ತಿನ ಪಂದ್ಯಗಳು ಮೊದಲ ಹಂತದಲ್ಲಿ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿದೆ. ಆ ನಂತರ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ(ಡಿಸೆಂಬರ್‌ನಲ್ಲಿ, 20 ಓವರ್‌ಗಳು)ಹಾಗೂ ವಿಜಯ್ ಹಝಾರೆ ಟ್ರೋಫಿ(ಜನವರಿಯಲ್ಲಿ, 50 ಓವರ್‌ಗಳು)ನಡೆಯಲಿದೆ.

ಕೊನೆಯ ಎರಡು ಲೀಗ್ ಪಂದ್ಯಗಳು ಹಗೂ ನಾಕೌಟ್ ಸುತ್ತುಗಳನ್ನು ಒಳಗೊಂಡ ರಣಜಿ ಟ್ರೋಫಿಯ ಎರಡನೇ ಹಂತವು ಜನವರಿ ಅಂತ್ಯಕ್ಕೆ ಮರು ಆರಂಭವಾಗಲಿದೆ.

2024-25ರ ರಣಜಿ ಫೈನಲ್‌ ನಲ್ಲಿ ಕೇರಳ ತಂಡವನ್ನು ಮಣಿಸಿದ್ದ ಹಾಲಿ ಚಾಂಪಿಯನ್ ವಿದರ್ಭ ತಂಡವು ಪ್ರಶಸ್ತಿ ಜಯಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News