×
Ad

ನಿತೀಶ್ ಸರ್ವ ಮಾದರಿಯ ಶ್ರೇಷ್ಠ ಕ್ರಿಕೆಟಿಗನಾಗುತ್ತಾರೆ : ರೋಹಿತ್ ಶರ್ಮಾ

Update: 2025-10-20 21:22 IST

 ರೋಹಿತ್ ಶರ್ಮಾ | Photo Credit : PTI

ಪರ್ತ್, ಅ.20: ತನ್ನ ಚೊಚ್ಚಲ ಪಂದ್ಯವನ್ನು ರವಿವಾರ ಆಸ್ಟ್ರೇಲಿಯದ ವಿರುದ್ಧ ಆಡಿರುವ ನಿತೀಶ್ ಕುಮಾರ್ ರೆಡ್ಡಿ ಭವಿಷ್ಯದಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮುತ್ತಾರೆ ಎಂಬುದಾಗಿ ನನಗೆ 110 ಶೇಕಡ ಭರವಸೆಯಿದೆ ಎಂದು ಭಾರತೀಯ ಕ್ರಿಕೆಟ್ ತಂಡದ ಹಿರಿಯ ಆಟಗಾರ ರೋಹಿತ್ ಶರ್ಮಾ ಭವಿಷ್ಯ ನುಡಿದಿದ್ದಾರೆ.

ನಿತೀಶ್ ಕಳೆದ ವರ್ಷ ಆಸ್ಟ್ರೇಲಿಯದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ತನ್ನ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದಾರೆ. 2024ರ ನವೆಂಬರ್‌ನಲ್ಲಿ ಬ್ಯಾಟಿಂಗ್ ಮಾಂತ್ರಿಕ ವಿರಾಟ್ ಕೊಹ್ಲಿ, ನಿತೀಶ್‌ಗೆ ಪರ್ತ್‌ನ ಆಪ್ಟಸ್ ಸ್ಟೇಡಿಯಂನಲ್ಲಿ ಟೆಸ್ಟ್ ಕ್ಯಾಪ್ ನೀಡಿದ್ದರು.

ಈಗ 11 ತಿಂಗಳ ಬಳಿಕ, ಅವರು ತನ್ನ ಚೊಚ್ಚಲ ಏಕದಿನ ಪಂದ್ಯವನ್ನೂ ಆಸ್ಟ್ರೇಲಿಯದ ಆಪ್ಟಸ್ ಸ್ಟೇಡಿಯಂನಲ್ಲೇ ಆಡಿದ್ದಾರೆ. ರವಿವಾರ ಅವರ ಪ್ರಥಮ ಏಕದಿನ ಕ್ಯಾಪನ್ನು ರೋಹಿತ್ ಶರ್ಮಾ ಹಸ್ತಾಂತರಿಸಿದರು. ಕ್ಯಾಪ್ ಹಸ್ತಾಂತರದ ವೇಳೆ ಮಾತನಾಡಿದ ರೋಹಿತ್, ವೇಗದ ಬೌಲಿಂಗ್ ಆಲ್‌ರೌಂಡರ್ ನಿತೀಶ್ ಮೇಲೆ ಪ್ರಶಂಸೆಯ ಸುರಿಮಳೆಯನ್ನೇ ಹರಿಸಿದರು. ಇಪ್ಪತ್ತೆರಡು ವರ್ಷದ ಆಟಗಾರನಿಗೆ ಅತ್ಯುತ್ತಮ ಭವಿಷ್ಯವಿದೆ ಎಂದು ಹೇಳಿದ ಅವರು, ಇಡೀ ತಂಡವೇ ಅವರನ್ನು ಬೆಂಬಲಿಸುತ್ತದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News